ಶನಿವಾರಸಂತೆ, ಜೂ. 5: ಶುಂಠಿ ಬೇಸಾಯ ಮುಗಿದಿದ್ದು, ಉತ್ತಮ ದರದ ನಿರೀಕ್ಷೆಯಲ್ಲಿ ಜೋಪಾನವಾಗಿ ಉಳಿಸಿಕೊಂಡಿದ್ದ ರೈತರು ಇದೀಗ ಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಉತ್ತಮ ದರ ದೊರೆಯುತ್ತಿದ್ದು, ರೈತರ ಹರ್ಷ ಹೆಚ್ಚಾಗಿದೆ. ಶನಿವಾರ ಮಾರುಕಟ್ಟೆ ಯಲ್ಲಿ 60 ಕೆ.ಜಿ. ಶುಂಠಿ ತುಂಬಿದ ಚೀಲಕ್ಕೆ ರೂ. 6000 ರಿಂದ 8 ಸಾವಿರ ದರ ದೊರೆಯಿತು. ಕೇವಲ 30 ಚೀಲ ಶುಂಠಿ ಮಾರಾಟಕ್ಕೆ ಬಂದಿತ್ತು.
ಶುಂಠಿ ಬೇಸಾಯ ಮುಗಿದಿದ್ದು, 3 ತಿಂಗಳಿನಿಂದ ಹಸಿರು ಮೆಣಸಿನಕಾಯಿ ಬೇಸಾಯ ನಡೆಯುತ್ತಿದೆ. ಉತ್ತಮ ದರದ ನಿರೀಕ್ಷೆಯಿಂದ ಕೆಲವು ರೈತರು ಗದ್ದೆಯಲ್ಲಿ ಶುಂಠಿಯನ್ನು ಕೀಳದೆ ಹಾಗೇ ಮಣ್ಣು ಮುಚ್ಚ್ಚಿ, ಆಗಾಗ್ಗೆ ನೀರು ಹಾಕುತ್ತಾ ಜೋಪಾನ ಮಾಡಿ ದ್ದರು. ಇದೀಗ ಮಾರುಕಟ್ಟೆಯಲ್ಲಿ ಅಭಾವ ಉಂಟಾಗಿದೆ. ಬಚ್ಚಿಟ್ಟು ಕೊಂಡಿದ್ದ ಶುಂಠಿ ವ್ಯಾಪಾರ ಜೋರಾಗಿ ನಡೆದಿದೆ. ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಗಗನಕ್ಕೇರಿದೆ. ಬಹುತೇಕ ರೈತರು ಈಗಾಗಲೇ ಶುಂಠಿಯ ಬೀಜ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಶುಂಠಿ 6 ತಿಂಗಳು ಬೆಳೆ ಮಾರುಕಟ್ಟೆಯಲ್ಲಿ ಶುಂಠಿಯ ಗುಣಮಟ್ಟಕ್ಕೆ ಅನುಗುಣ ವಾಗಿ ದರ ದೊರೆಯುತ್ತಿದೆ.