ಮಡಿಕೇರಿ ಜೂ. 5: ಜಿಲ್ಲಾ ಪಂಚಾಯತ್ ವತಿಯಿಂದ ಸ್ವಚ್ಛ ಭಾರತ್ ಮಿಷನ್ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕ ರಿಗೆ ಪ್ಲಾಸ್ಟಿಕ್ ಅನಾಹುತದ ಕುರಿತು ಜಾಗೃತಿ ಮೂಡಿಸುತ್ತಿದ್ದು, ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಲು ಸಾರ್ವಜನಿಕರಿಗೆ ಉತ್ತೇಜನ ನೀಡಲಾಗುತ್ತಿದೆ.

ಪ್ಲಾಸ್ಟಿಕ್ ಪರ್ಯಾಯ ವಸ್ತುಗಳಾದ ಎಲೆಯಿಂದ ತಯಾರಿಸಿದ ತಿನಿಸು ತಟ್ಟೆ, ಊಟದ ತಟ್ಟೆ, ಚಾಟ್ಸ್, ಹಣ್ಣು ಹಂಚುವ ಕಿರು ತಟ್ಟೆ, ವಿವಿಧ ಮಾದರಿಯ ಬಟ್ಟೆ ಬ್ಯಾಗ್‍ಗಳು, ಸ್ಟೀಲ್ ಲೋಟ, ತಟ್ಟೆ, ಸ್ಪೂನ್, ಕಾಗದದ ಕವರ್‍ಗಳು, ಕಾಟನ್ ನ್ಯಾಫ್ ಕಿನ್‍ಗಳು, ಇನ್ನಿತರ ಪರಿಸರ ಪ್ರಿಯ ವಸ್ತುಗಳನ್ನು ತಯಾರಿಸುತ್ತಿರುವ ಹಾಗೂ ಮಾರಾಟ ಮಾಡುತ್ತಿರುವ ಉದ್ಯಮಿಗಳು, ವ್ಯಾಪಾರಸ್ಥರ ವಿವರಗಳನ್ನು ಇ-ಮೇಲ್ ವಿಳಾಸ ಣsಛಿಞoಜಚಿgu @gmಚಿiಟ.ಛಿomಗೆ ಅಥವಾ ದೂರವಾಣಿ ಸಂಖ್ಯೆ 9448337089 ವಾಟ್ಸ್‍ಆಪ್ ಮುಖಾಂತರ ತಾ. 7 ರ ಒಳಗೆ ಸ್ವಚ್ಛ ಭಾರತ್ ಮಿಷನ್ ಕೊಡಗು ಜಿಲ್ಲಾ ಪಂಚಾಯತ್‍ನಲ್ಲಿ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.