ಮಡಿಕೇರಿ, ಜೂ. 5: ಪ್ರಸಕ್ತ (2019-20) ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯನ್ನು ಕೊಡಗು ಜಿಲ್ಲೆಯ ಎಲ್ಲಾ 3 ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಯಾದ ಕಾಳು ಮೆಣಸಿಗೆ ಹಾಗೂ ಅಡಿಕೆಗೆ ಅನುಷ್ಠಾನಗೊಳಿಸ ಲಾಗುವದು. ಹವಾಮಾನ ಅಂಶಗಳಾದ ಮಳೆಯ ಪ್ರಮಾಣ, ತಾಪಮಾನ ಆರ್ದತೆ ಮತ್ತಿತರ ಮಾಹಿತಿಗಳನ್ನು ಸ್ಥಳೀಯ ವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗು ವದು. ಈ ಯೋಜನೆಯ ವಿಮೆ ನೊಂದಾಣಿಗೆ ತಾ. 30 ಕೊನೆಯ ದಿನವಾಗಿದೆ.

2019ರ ಮುಂಗಾರು ಹಂಗಾಮಿಗೆ ಮರು ವಿನ್ಯಾಸ ಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆವಾರು, ವಿಮಾ ಮೊತ್ತ ಹಾಗೂ ವಿಮಾ ಕಂತಿನ ವಿವರ ಇಂತಿದೆ. ಕಾಳು ಮೆಣಸಿಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 47 ಸಾವಿರ, ವಾಣಿಜ್ಯ ವಿಮಾ ಕಂತಿನ ದರ 24.50, ಪ್ರತಿ ಹೆಕ್ಟೇರ್‍ಗೆ ಕಂತು ರೂ.11,515, ರೈತರು ಪಾವತಿಸಬೇಕಾದ ಪ್ರಮಾಣ (5%)2,350. ಅಡಿಕೆಗೆ ಪ್ರತಿ ಹೆಕ್ಟೇರ್‍ಗೆ ವಿಮಾ ಮೊತ್ತ 1,28,000, ವಾಣಿಜ್ಯ ವಿಮಾ ಕಂತಿನ ದರ 22, ಪ್ರತಿ ಹೆಕ್ಟೇರ್‍ಗೆ ಕಂತು ರೂ.28,160, ರೈತರು ಪಾವತಿಸಬೇಕಾದ ಪ್ರಮಾಣ (5%) 6,400 ಆಗಿರುತ್ತದೆ. ನಿಗದಿ ಪಡಿಸಿದ ವಿಮಾ ಸಂಸ್ಥೆ- ಓರಿಯಂಟಲ್ ಐ.ಸಿ. ಹೆಚ್ಚಿನ ಮಾಹಿತಿಗೆ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ/ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹತ್ತಿರದ ಬ್ಯಾಂಕುಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕ ರಾದ ಚಂದ್ರಶೇಖರ ತಿಳಿಸಿದ್ದಾರೆ.