ವೀರಾಜಪೇಟೆ, ಜೂ. 5: ವೀರಾಜಪೇಟೆಯಿಂದ ತೋರ ಗ್ರಾಮದ ಮಾರ್ಗವಾಗಿ ಕೆದಮುಳ್ಳೂರು ಗ್ರಾಮವನ್ನು ಸಂಪರ್ಕಿಸಲು ಯಾವದೇ ಬಸ್ಸಿನ ವ್ಯವಸ್ಥೆ ಇಲ್ಲವೆಂದು ಕೆದಮುಳ್ಳೂರು ಹಾಗೂ ತೋರ ಗ್ರಾಮದ ಕೆ.ಸಿ.ಪ್ರದ್ಯುಮ್ನ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕೆದಮುಳ್ಳೂರು ಗ್ರಾಮದಲ್ಲಿ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳ ಉಪ ಕಚೇರಿಗಳಿದ್ದು ಈ ವಿಭಾಗದ ಎಲ್ಲ ಗ್ರಾಮಗಳಿಂದಲೂ ಶಾಲಾ ಕಾಲೇಜುಗಳಿಗೂ ವಿದ್ಯಾರ್ಥಿಗಳು ತೆರಳುತ್ತಿದ್ದು ಬಸ್ಸಿನ ತೊಂದರೆಯಾಗಿದೆ ಎಂದು ಪ್ರದ್ಯುಮ್ನ ದೂರಿದ್ದಾರೆ ಅಲ್ಲದೆ ಬಸ್ ಸೌಲಭ್ಯಕ್ಕೆ ಆಗ್ರಹಿಸಿದ್ದಾರೆ.