ಕಡಗದಾಳು, ಜೂ. 5: ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ವತಿಯಿಂದ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 7 ಗೋಡೆ ಗಡಿಯಾರಗಳನ್ನು ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಪಿ.ಸಿ ಕೃಷ್ಣಪ್ಪ, ಉಪಾಧ್ಯಕ್ಷ ಪಿ.ಕೆ. ಮಹೇಶ್ ಹಾಗೂ ಸದಸ್ಯರು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಡಿಯಾರಗಳನ್ನು ಹಸ್ತಾಂತರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್.ಅರ್. ರಾಜು, ಕಡಗದಾಳು ವಿಭಾಗದ ಸಿಆರ್‍ಪಿ ಸೌಮ್ಯ ಶೆಟ್ಟಿ ಹಾಗೂ ಇತರರು ಈ ಸಂದರ್ಭ ಹಾಜರಿದ್ದರು.