ಸೋಮವಾರಪೇಟೆ, ಜೂ. 4: ಯಾವದೇ ಸಮುದಾಯ ಏಳಿಗೆ ಸಾಧಿಸಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಆ ನಿಟ್ಟಿನಲ್ಲಿ ಯಾವೊಬ್ಬ ಮಗುವೂ ವಿದ್ಯಾ ಭ್ಯಾಸದಿಂದ ವಂಚಿತಗೊಳ್ಳದಂತೆ ಕಾಳಜಿ ವಹಿಸಬೇಕೆಂದು ಡಿ.ವೈ.ಎಸ್. ಪಿ. ದಿನಕರಶೆಟ್ಟಿ ಕರೆ ನೀಡಿದರು.
ಇಲ್ಲಿನ ಸಾಕ್ಷಿ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಎಲ್ಲರೂ ಮಾಹಿತಿ ಪಡೆದು, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಪ್ರಗತಿ ಕಾಣಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಬಿ. ಜನಾರ್ಧನ ಶೆಟ್ಟಿ ಮಾತನಾಡಿ, ಸಮುದಾಯದ ಸಂಘಟನೆ ಬಲಿಷ್ಠಗೊಂಡರೆ ಮಾತ್ರ ಅಭಿವೃದ್ಧಿ ಕಾಣಬಹುದು ಎಂದರು.
ಚೌಡ್ಲು ಗ್ರಾಮದ ಗಾಂಧಿನಗರ ದಲ್ಲಿ ಸಂಘಕ್ಕೆ ಸೇರಿರುವ ನಿವೇಶನದಲ್ಲಿ ಸಮುದಾಯ ಭವನ, ಕಚೇರಿ ಕಟ್ಟಡ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಎಸ್.ಎಸ್. ಎಲ್.ಸಿ ಮತ್ತು ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಪ್ರಾಧ್ಯಾಪಕ ಕರಿಯಪ್ಪ ರೈ ಅವರನ್ನು ಸನ್ಮಾನಿಸಲಾಯಿತು. ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ವಾರ್ಷಿಕ ಸಭೆ ಉದ್ಘಾಟಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಐತಪ್ಪ ರೈ, ತಾಲೂಕು ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ಶೆಟ್ಟಿ, ಡಾ. ಹರೀಶ್ ಎ. ಶೆಟ್ಟಿ, ಖಜಾಂಚಿ ಮಂಜುನಾಥ್ಚೌಟ, ಪದಾಧಿಕಾರಿ ಗಳಾದ ಸುಧಾಕರ್ ಶೆಟ್ಟಿ, ಉಮೇಶ್ ಶೆಟ್ಟಿ, ಯುವ ವೇದಿಕೆ ಅಧ್ಯಕ್ಷ ಅನಿಲ್ ಶೆಟ್ಟಿ, ರವೀಂದ್ರ ರೈ, ಬಾಲಕೃಷ್ಣ ರೈ, ಸಂತೋಷ್ ರೈ ಸೇರಿದಂತೆ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.