ಗೋಣಿಕೊಪ್ಪ ವರದಿ, ಜೂ. 4: ಬ್ಯಾಡ್‍ಮಿಂಟನ್ ಕ್ರೀಡಾಕೂಟದಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಕ್ರೀಡಾಪಟುಗಳಾದ ಬೊಪ್ಪಂಡ ದಿಯಾ ಭೀಮಯ್ಯ ಹಾಗೂ ಬೊಪ್ಪಂಡ ವಿಶಾಲ್ ಉತ್ತಪ್ಪ ಪ್ರಶಸ್ತಿಯ ಸಾಧನೆ ಮಾಡಿದ್ದಾರೆ. ಮೇ ತಿಂಗಳಲ್ಲಿ ಬೆಂಗಳೂರಿನ ವೈಟ್‍ಫೀಲ್ಡ್ ಹಾಗೂ ಮ್ಯಾಚ್ ಪಾಯಿಂಟ್ ಬ್ಯಾಡ್ ಮಿಂಟನ್ ಆರ್ಕೆಡ್‍ನಲ್ಲಿ ನಡೆದ ವಿವಿಧ ಟೂರ್ನಿಗಳಲ್ಲಿ ದಿಯಾ ಭೀಮಯ್ಯ 6 ವಿಭಾಗಗಳಲ್ಲಿ ಸ್ಪರ್ಧಿಸಿ 6 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಸಹೋದರ ವಿಶಾಲ್ ಉತ್ತಪ್ಪ 1 ಪ್ರಶಸ್ತಿ ಗಿಟ್ಟಿಸಿದ್ದಾರೆ. ದಿಯಾ ಭೀಮಯ್ಯ 12 ಹಾಗೂ 13 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಿದರು. ಯೋನೆಕ್ಸ್ ಸನ್‍ರೈಸ್ ರಿಲಯನ್ಸ್ ಕ್ಲಬ್ ಕಿರಿಯರ ರಾಜ್ಯಮಟ್ಟದ ರ್ಯಾಂಕಿಂಗ್ ಬ್ಯಾಡ್‍ಮಿಂಟನ್ ಟೂರ್ನಿಯಲ್ಲಿ ಡಬಲ್ಸ್‍ನಲ್ಲಿ ತೃತೀಯ ಸ್ಥಾನ ಪಡೆದರು.ಯೋನೆಕ್ಸ್ ಸನ್‍ರೈಸ್ ಅಕ್ಷಯಾ ಸ್ಪೋಟ್ಸ್ ಅಕಾಡೆಮಿ ಸಬ್ ಜೂನಿಯರ್ ರಾಜ್ಯಮಟ್ಟದ ಟೂರ್ನಿಯ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರತ್ಯೇಕ ವಿಭಾಗಗಳಲ್ಲಿ ತೃತೀಯ, ಯೋನೆಕ್ಸ್ ಸನ್‍ರೈಸ್ ಯಾದವ್ ಪ್ರೋ ರಾಜ್ಯಮಟ್ಟದ ರ್ಯಾಂಕಿಂಗ್ ಬ್ಯಾಡ್‍ಮಿಂಟನ್ ಟೂರ್ನಿಯ ಸಿಂಗಲ್ಸ್ ಹಾಗೂ ಡಬಲ್ಸ್ ಪ್ರತ್ಯೇಕ ವಿಭಾಗದಲ್ಲಿ ತೃತೀಯ ಸ್ಥಾನ, ಬೆಂಗಳೂರು ಯಾದವ್ ಕೃಷ್ಣಪ್ಪ ಮೆಮೋರಿಯಲ್ ಸಬ್ ಜೂನಿಯರ್ ಓಪನ್ ಟೂರ್ನಿಯಲ್ಲಿ 12 ವರ್ಷದೊಳಗಿನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಶಾಲ್ ಉತ್ತಪ್ಪ ಯಾದವ್ ಪ್ರೋ ಸಬ್ ಜೂನಿಯರ್ ಓಪನ್ ಬ್ಯಾಡ್‍ಮಿಂಟನ್ ಟೂರ್ನಿಯಲ್ಲಿ 8 ವರ್ಷದೊಳಗಿನ ಸಿಂಗಲ್ಸ್ ವಿಭಾಗದಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಬಿಟ್ಟಂಗಾಲ ಬೊಪ್ಪಂಡ ಭೀಮಯ್ಯ ಹಾಗೂ ಕುಸುಮಾ ದಂಪತಿ ಮಕ್ಕಳಾಗಿರುವ ಇವರಿಗೆ ಅರುಣ್ ಪೆಮ್ಮಯ್ಯ ಹಾಗೂ ಭೀಮಯ್ಯ ತರಬೇತು ನೀಡಿದ್ದಾರೆ.