ಮಡಿಕೇರಿ, ಜೂ. 4: ರಾಜ್ಯದಲ್ಲಿ ಮಳೆ ವಿಳಂಬದ ಅಭಾವದಿಂದಾಗಿ ಅತ್ಯಂತ ಬರ ಪರಿಸ್ಥಿತಿ ಇರುವ ಕಾರಣ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಮೃದ್ಧ ಮಳೆ-ಬೆಳೆಗಾಗಿ ವಿಶೇಷ ಪ್ರಾರ್ಥನೆ ‘ಬ್ರಾಹ್ಮೀ ಮುಹೂರ್ತ’ದಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ತಾ. 6 ರಂದು ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ತಿಳಿಸಿದ್ದಾರೆ.