ಮಡಿಕೇರಿ, ಜೂ. 4: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ, ನವದೆಹಲಿ ಇದರ ಆಶ್ರಯದಲ್ಲಿ ನಡೆದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕುಂಜಿಲ ರವುಲತ್ತುಲ್ ಉಲೂಂ ಮದ್ರಸದ ವಿದ್ಯಾರ್ಥಿನಿ ಸುರಯ್ಯ ಅಜೀಜ್ ಒಟ್ಟು 600 ಅಂಕಗಳಲ್ಲಿ 591 ಅಂಕ ಗಳಿಸಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಈಕೆ ಕುಂಜಿಲದ ಪಿ.ಎಂ. ಅಜೀಜ್ ಮಾಸ್ಟರ್ ಹಾಗೂ ಸುಮಯ್ಯ ದಂಪತಿಗಳ ಪುತ್ರಿ.