ನಾಪೆÉÇೀಕ್ಲು, ಜೂ. 4: ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಇಂದಿರಾ ನಗರದ ನಿವಾಸಿಗಳಾದ ಪಂಜೇರಿರ ವಾಸು, ಜೋಯಿ ಮತ್ತು ಅಬ್ದುಲ್ಲ ಅವರ ಮನೆಗೆ ಹೋಗುವ ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಸದಸ್ಯೆ ವನಜಾಕ್ಷಿ, ಗುತ್ತಿಗೆದಾರ ಚುಕ್ಕಂಡ ಉಂಬಾಯಿ, ಮತ್ತಿತರರು ಇದ್ದರು.