ಪೊನ್ನಂಪೇಟೆ, ಜೂ. 4: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಕೊಡಗಿನ ಅಜ್ಜಿಕುಟ್ಟೀರ ಎಸ್.ನರೇನ್ ಕಾರ್ಯಪ್ಪ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಲಿಖಿತ ಆದೇಶ ಮತ್ತು ರಾಜ್ಯ ಅರಣ್ಯ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಶಿಪಾರಸ್ಸಿನಂತೆ ನರೇನ್ ಕಾರ್ಯಪ್ಪ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ಅಧಿಕಾರದನ್ವಯ ನರೇನ್ ಕಾರ್ಯಪ್ಪ ಅವರನ್ನು ಈ ನಿಗಮದ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ರಾಜ್ಯಪಾಲರ ಹೆಸರಿನಲ್ಲಿ ಆದೇಶ ಪತ್ರ ಹೊರಡಿಸಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳಾದ (ಪ್ರ) ಕೆ.ಆರ್.ರಮೇಶ್ ಅವರು, ನರೇನ್ ಕಾರ್ಯಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಜ್ಜಿಕುಟ್ಟೀರ ಎಸ್.ನರೇನ್ ಕಾರ್ಯಪ್ಪ ಅವರು ರಾಜ್ಯದ ಹಿರಿಯ ನ್ಯಾಯವಾದಿ ಮತ್ತು ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಅವರ ಹಿರಿಯ ಪುತ್ರ.