ಶ್ರೀಮಂಗಲ, ಜೂ. 3: ಕೊಡವ ಭಾಷೆಯ ಯುವ ಸಾಹಿತಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ಹಿರಿ-ಕಿರಿಯ ಕವಿಗಳ ಸಮ್ಮಿಲನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೊಡವ ತಕ್ಕ್ ಎಳ್ತ್ಕಾರಡ ಕೂಟದ 25ನೇ ವರ್ಷಾಚರಣೆಯ ಅಂಗವಾಗಿ ‘ಕವಿವೋರ್ಮೆ’ ಎಂಬ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಯುವ ಕವಿಗಳು ಈ ಸದುದ್ದೇಶವನ್ನು ಸದ್ಬಳಕೆ ಮಾಡಿಕೊಂಡು ಕೊಡವ ಭಾಷೆಯ ಸಾಹಿತ್ಯ ಬೆಳವಣಿಗೆಗೆ ಕೈಜೋಡಿಸಬೇಕೆಂದು ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕರೆ ನೀಡಿದರು.
ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಆಶ್ರಯದಲ್ಲಿ 25ನೇ ವರ್ಷಾಚರಣೆಯ ಸಂದರ್ಭ ಮಾಡಲು ಉದ್ದೇಶಿಸಿರುವ ‘ಬೆಳ್ಳಿ ಹಬ್ಬ’ದ ಪ್ರಯುಕ್ತ 25 ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು, ಈ ಯೋಜನೆಯ ಎರಡನೇ ಕಾರ್ಯಕ್ರಮ ನಡೆದ ಕವಿವೋರ್ಮೆ ಎಂಬ ಹೆಸರಿನ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡವ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿಸಲು ಆಸಕ್ತಿ ಇರುವ ಹಲವು ಯುವ ಪ್ರತಿಭೆಗಳಿದ್ದು, ಅವರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಈ ವೇದಿಕೆಯನ್ನು ಸೃಷ್ಟಿಸಲಾಗಿದ್ದು, ಯುವ ಕವಿಗಳು ಉತ್ಸಾಹದಿಂದ ಭಾಗಿಯಾಗಿರುವದು ಕೊಡವ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. 25ನೇ ವರ್ಷಾಚಾರಣೆಯ ಅಂಗವಾಗಿ ರಾಜ್ಯ ಮಟ್ಟದ ಕವಿಗೋಷ್ಟಿಗೆ ಆಯ್ದ 25 ಯುವ ಕವಿಗಳು ತಮ್ಮ ಮನಸ್ಸಿನ ವಿವಿಧ ಭಾವನೆಗಳಿಗೆ ಅಕ್ಷರ ರೂಪ ನೀಡಿರುವದು ಕೊಡವ ಭಾಷೆಯಲ್ಲಿ ಸಾಹಿತಿಗಳಿಗೆ ಬರವಿಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸದಸ್ಯೆ ಬೊಪ್ಪಂಡ ಜೂನ ಮಾತನಾಡಿ ಮನಸ್ಸಿನ ಬೇಸರ ಕಳೆಯುವ ಸಾಮಥ್ರ್ಯವಿರುವ ಹಾಡು ಹಾಗೂ ಕವನ ರಚನೆ ಮಾಡುವದು ಸುಲಭ ಸಾಧ್ಯವಲ್ಲ. ಯುವ ಕವಿಗಳಿಗೆ ಕೊಡವ ತಕ್ಕ್ ಎಳ್ತ್ಕಾರಡ ಕೂಟ ವೇದಿಕೆ ನೀಡಿ ಪೆÇ್ರೀತ್ಸಾಹಿಸುತ್ತಿರುವದು ಉತ್ತಮ ಬೆಳೆವಣಿಗೆಯಾಗಿದ್ದು, ಇದರ ಪ್ರಯೋಜನವನ್ನು ಕವಿಗಳು ಪಡೆದುಕೊಳ್ಳಬೇಕೆಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸ್ಥಾಪಕ ಸದಸ್ಯ ಬಲ್ಯಮೀದೇರಿರ ಸುಬ್ರಮಣಿ ಮಾತನಾಡಿ ತಮ್ಮ ಶ್ರಮಕ್ಕೆ ಸರಿಯಾದ ಸಹಕಾರ ಸಿಗದೆ ಇದ್ದ ಕಾರಣ ಕಲೆ, ಸಾಹಿತ್ಯಕ್ಕೆ ಹೆಚ್ಚು ಪೆÇ್ರೀತ್ಸಾಹ ಸಿಗುವ ನೆಲೆ ಇದಲ್ಲ ಎಂದು ಬಹಳ ಹಿಂದೆ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಹೇಳಿದ್ದರು. 25 ವರ್ಷಕ್ಕೂ ಮುಂಚೆ ನಾವು ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದಾಗಲೂ ಸಾಮಾಜಿಕ ಜಾಲ ತಾಣ ಸೇರಿದಂತೆ ಯಾವದೇ ಅನುಕೂಲಗಳಿರಲಿಲ್ಲ. ಅಂತಹ ಸಮಯದಲ್ಲಿ ನಾವು ಕೆಲವರು ಸೇರಿ ಸ್ಥಾಪಿಸಿದ ಕೊಡವ ತಕ್ಕ್ ಎಳ್ತ್ಕಾರಡ ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಲಹೆಗಾರ ಚೇಂದ್ರಿಮಾಡ ಪ್ರಿನ್ಸ್ ಸೋಮಯ್ಯ ಮಾತನಾಡಿ ವೇದಿಕೆ ಸಿಗುವದೇ ಕಷ್ಟಕರವಾಗಿರುವ ಅಂದಿನ ಕಾಲದಲ್ಲಿ ಹುಟ್ಟಿದ ಈ ‘ಕೂಟ’ವು ನೂರಾರು ಸಾಹಿತಿ ಹಾಗೂ ಕಲಾವಿದರನ್ನು ಬೆಳೆಸಿದೆ. ‘ಕೂಟ’ ನೀಡುತ್ತಿರುವ ವೇದಿಕೆ ಹಾಗೂ ಪೆÇ್ರೀತ್ಸಾಹದಿಂದ ಇನ್ನಷ್ಟು ಸಾಹಿತಿಗಳು ಹೊರಹೊಮ್ಮಲಿ ಎಂದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸ್ಥಾಪಕ ಅಧ್ಯಕ್ಷ ಚೆಂಬಾಡ ಶಿವಿ ಭೀಮಯ್ಯರವರು ಪ್ರಥಮವಾಗಿ ಕವನ ವಾಚಿಸಿ ಆರಂಭಿಸಿದ ಕವಿಗೋಷ್ಠಿಯಲ್ಲಿ ಉಳುವಂಗಡ ಕಾವೇರಿ ಉದಯ, ಬೊಳಂದಂಡ ದೇಚಮ್ಮ ದಿಲೀಪ್, ಚೆಟ್ಟೋಳಿರ ಶರತ್ ಸೋಮಣ್ಣ, ಕಳ್ಳಿಚಂಡ ದೀನಾ ಉತ್ತಪ್ಪ, ಸಣ್ಣುವಂಡ ಕಿಶು ದೇವಯ್ಯ, ಚೆಟ್ಟಂಗಡ ಕಂಬಣ ಕಾರ್ಯಪ್ಪ, ಚೋನಿರ ಪಾವನ ಸುಬ್ರಮಣಿ, ಮಳವಂಡ ಮಾನ್ಷಿ ನಂಜಪ್ಪ, ಮಂದೆಯಂಡ ವನಿತ್ ನಾಣಯ್ಯ, ಚೆಂಬಾಂಡ ಸಮರ್ಥ್ ಭೀಮಯ್ಯ, ಕೋಟೆರ ಉದಯ ಪೂಣಚ್ಚ, ಬಲ್ಯಮಿದೇರಿರ ಸುಬ್ರಮಣಿ, ಚಿಮ್ಮಚ್ಚಿರ ಪವಿತ ರಜನ್, ಮೂವೇರ ರೇಖಾ ಪ್ರಕಾಶ್, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಚಂಗುಲಂಡ ಅಜಿತ್ ಅಯ್ಯಪ್ಪ, ಚೇಂದ್ರಿಮಾಡ ಪ್ರಿನ್ಸ್ ಸೋಮಯ್ಯ, ಚಾಮೇರ ದಿನೇಶ್ ಬೆಳ್ಯಪ್ಪ, ನೂರೇರ ಜೀವನ್ ಅಯ್ಯಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಕೇಳಪಂಡ ನೆಹರು, ಅಜ್ಜಮಕ್ಕಡ ವಿನು ಬೆಳ್ಯಪ್ಪ, ಕೊಟ್ಟಂಗಡ ರಾಧ ಗಣಪತಿ, ಚೆಟ್ಟಂಗಡ ರವಿ ಸುಬ್ಬಯ್ಯ ಸೇರಿದಂತೆ 25 ಕವಿಗಳು ಕವನ ವಾಚಿಸಿದರು.
ಗೀತಗಾಯನ ಕಾರ್ಯಕ್ರಮದಲ್ಲಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಅಜ್ಜಮಕ್ಕಡ ವಿನು ಬೆಳ್ಯಪ್ಪ, ನೂರೇರ ಜೀವನ್, ಚಂಗುಲಂಡ ಅಜಿತ್ ಅಯ್ಯಪ್ಪ, ಬಲ್ಯಮೀದೇರಿರ ಸುಬ್ರಮಣಿ, ಕೊಟ್ಟಂಗಡ ರಾಧ ಗಣಪತಿಯವರ ಗಾಯನ ನೆರದಿದ್ದವರನ್ನು ರಂಜಿಸಿತು.
ಸುಳ್ಳಿಮಾಡ ಶಿಲ್ಪ ಅಪ್ಪಣ್ಣ, ಕೊಟ್ಟಂಗಡ ರಾಧ ಗಣಪತಿ ಪ್ರಾರ್ಥಿಸಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ನಿರ್ದೇಶಕ ಚೆಂಬಾಂಡ ಶಿವಿ ಭೀಮಯ್ಯ ಸ್ವಾಗತಿಸಿ ಕೂಟದ ನಿರ್ದೇಶಕರಾದ ಕಾಳಿಮಾಡ ಮೋಟಯ್ಯ ಹಾಗೂ ಕೋಟೇರ ಉದಯ ಪೂಣಚ್ಚ ನಿರೂಪಿಸಿ ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.