ಮಡಿಕೇರಿ, ಜೂ. 3: ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ಮಡಿಕೇರಿ ಶಾಖಾ ಉದ್ಘಾಟನೆ ನೆರವೇರಿತು. ಸಂಘದ ರಾಜ್ಯಾಧ್ಯಕ್ಷ ಬಿ.ಕೆ. ಗುರುರಾಜ್, ಉಪಾಧ್ಯಕ್ಷ ರಂಗನಾಥ್, ಕಾರ್ಯಾಧ್ಯಕ್ಷ ಎನ್. ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನೆನಪು ಲೋಕೇಶ್ ಮತ್ತು ರಾಜ್ಯ ಪದಾಧಿಕಾರಿಗಳು ಹಾಗೂ ಹಲವು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಪೆನ್ಷನ್ಲೇನ್ನ ಶ್ರೀ ಕೋಟೆಮಾರಿಯಮ್ಮ ಮಿತ್ರ ಮಂಡಳಿಯ ಭವನದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಮಡಿಕೇರಿ ನಗರಸಭೆ ಮಾಜಿ ಸದಸ್ಯ ಸತೀಶ್ ಪೈ ಜಿ.ಎಂ., ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿನ ಕ.ರಾ.ಸಾ.ಕ.ಸಂ.(ರಿ) ಮಡಿಕೇರಿ ಶಾಖೆ ಅಧ್ಯಕ್ಷ ಪಿ.ಆರ್. ದೇವರಾಜ್ ಮತ್ತು ಶಾಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ಬೆಂಗಳೂರು ಮತ್ತು ಕೆಲವು ಜಿಲ್ಲಾ, ತಾಲೂಕು ಶಾಖೆ ವತಿಯಿಂದ ನೆರೆ ಸಂತ್ರಸ್ತರಿಗಾಗಿ ಸಂಗ್ರಹ ಮಾಡಿದಂತಹ ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು. ಈ ಹಣವನ್ನು ಪ್ರಮುಖವಾಗಿ ಕಲಾವಿದರಿಗೆ (ಕಲಾ ವರ್ಗಕ್ಕೆ) ನೀಡಬೇಕೆಂದು ತೀರ್ಮಾನಿಸಿ ನೀಡಲಾಯಿತು.