ಮಡಿಕೇರಿ, ಜೂ. 3: 2019-20ನೇ ಸಾಲಿನ ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಪದವಿ ಕಾಲೇಜಿನಲ್ಲಿ ಮಾಡಲಾಯಿತು. ಅಧ್ಯಕ್ಷರಾಗಿ ಉಡುಪಿ, ಸೆಂಟ್ ಮೇರಿಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಥಾಮಸ್, ಗೌರವ ಕಾರ್ಯದರ್ಶಿಗಳಾಗಿ ಗೋಣಿಕೊಪ್ಪಲು, ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಂದೆಯಂಡ ವನಿತ್ ಕುಮಾರ್, ಸಹ ಕಾರ್ಯದರ್ಶಿ ಪ್ರೊ. ಶಕೀಲ ಹೆಗ್ಡೆ, ಖಜಾಂಚಿಯಾಗಿ ಡಾ.ಗಣೇಶ ಶೆಟ್ಟಿ, ಡಾ. ಲತ ಪಂಡಿತ್, ಡಾ. ನಯನ, ಮಡಿಕೇರಿ ಪ್ರೊ. ಕುಸುಮ ಅವರನ್ನು ಅಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಧ್ಯಾಪಕ ಡಾ. ಪದ್ಮನಾಭ ಭಟ್ ಅವರನ್ನು ಸನ್ಮಾನಿಸಲಾಯಿತು.