ಮಡಿಕೇರಿ, ಜೂ. 2: ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ಮಾಸಿಕ ಸಭೆಯು ಕೂಟದ ಅಧ್ಯಕ್ಷರಾದ ಚಿರಿಯಪಂಡ ಇಮ್ಮಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮಹಿಳಾ ವಿಭಾಗ ನಡೆದು ಬಂದ ಹಾದಿ ಮತ್ತು ಪ್ರಗತಿಯ ಕುರಿತು ಪದಾಧಿಕಾರಿಗಳು ಸಮಾಲೋಚಿಸಿದರು.
ಅಧ್ಯಕ್ಷೆ ಇಮ್ಮಿ ಉತ್ತಪ್ಪ ಮಾತನಾಡಿ ಕೂಟದ ವತಿಯಿಂದ ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳಾ ಸಮೂಹಕ್ಕೆ ಪ್ರೋತ್ಸಾಹ ಮತ್ತು ಸ್ಫೂರ್ತಿಯನ್ನು ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷೆ ಸರಸು ನಾಣಯ್ಯ ಮಾತನಾಡಿ, ಕೊಡಗಿನ ಆಚಾರ, ವಿಚಾರ, ಪದ್ದತಿಯನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸುವಂತಾಗಬೇಕು ಮತ್ತು ಈ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕೂಟದ ಗಂಗಾ ತಂಡದ ವತಿಯಿಂದ ಮಹಿಳೆಯರಿಗೆ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸದಸ್ಯರಾದ ಕನ್ನಂಡ ಕವಿತಾ ಬೊಳ್ಳಪ್ಪ, ಬೊಳ್ಳಜಿರ ಯಮುನಾ ಅಯ್ಯಪ್ಪ, ರೇಖಾ ತಮ್ಮಯ್ಯ, ಉಷಾನಾಚಪ್ಪ, ಟಿಟ್ಟಿ ಸೋಮಣ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೊಳ್ಳಮ್ಮ ನಾಣಯ್ಯ ವಂದಿಸಿದರು.