ಮಡಿಕೇರಿ, ಜೂ. 2: ಪಾರಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವವನ್ನು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳನ್ನು ತಾ.ಪಂ. ಸದಸ್ಯೆ ಉಮಾಪ್ರಭು ಅವರು ಮಿಠಾಯಿಯನ್ನು ನೀಡಿ ಬರಮಾಡಿಕೊಂಡರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಎನ್.ವಿ. ಧನಂಜಯ ಅವರು ವಹಿಸಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯೋಪಾಧ್ಯಾಯಿನಿ ಹೆಚ್.ಎನ್. ಶಾಂತಿ ಸ್ವಾಗತಿಸಿದರು. ಮಕ್ಕಳನ್ನು ಉದ್ದೇಶಿಸಿ ಶಿಕ್ಷಕ ಕೆ.ಟಿ. ಕಿಶೋರ್‍ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷೆ ಹೆಚ್.ಎ. ಅನಿತ ಹಾಗೂ ಮಡಿಕೇರಿ ತಾ.ಪಂ. ಸದಸ್ಯೆ ಉಮಾಪ್ರಭು ಉಚಿತ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು.
ಶಾಲಾ ಸಹ ಶಿಕ್ಷಕರಾದ ಎಸ್.ಎಲ್. ಗೌರಮಣಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಕೆ. ಪೂವಣ್ಣ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಿಹಿಯೂಟ ನೀಡಲಾಯಿತು.