ಮಡಿಕೇರಿ, ಜೂ. 2: ಸರ್ಕಾರಿ ಪ್ರಾಥಮಿಕ ಶಾಲೆ ಕೋಡಿ ಪೆರಾಜೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ. ಜಯಂತಿ ಮೇ 31 ರಂದು 39 ವರ್ಷಗಳ ಸುದೀರ್ಘ ಸೇವೆ ಪೂರ್ಣಗೊಳಿಸಿ ಸ್ವಯಂ ನಿವೃತ್ತಿ ಹೊಂದಿದರು.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ತನ್ನ ವೃತ್ತಿ ಜೀವನವನ್ನು 1979 ರಂದು ಮಡಿಕೇರಿ ತಾಲೂಕಿನ ಸ.ಹಿ.ಪ್ರಾ ಶಾಲೆ ಕಾಂಡನಕೊಲ್ಲಿಯಲ್ಲಿ ಆರಂಭಿಸಿ, ನಂತರ ಸ.ಹಿ.ಪ್ರಾ.ಶಾಲೆ ಹಾಕತ್ತೂರು, ಸ.ಹಿ.ಪ್ರಾ ಶಾಲೆ ಕೊಯನಾಡು, ಸ.ಹಿ.ಪ್ರಾ.ಶಾಲೆ ಪೆರಾಜೆಯಲ್ಲಿ ಸೇವೆ ಸಲ್ಲಿಸಿ 2002 ರಿಂದ ಇಲ್ಲಿಯವರೆಗೆ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಇವರು ಸುಳ್ಯ ತಾಲೂಕಿನ ಹಳೆಗೇಟಿನ ನಿವೃತ್ತ ಶಿರಸ್ತೆದಾರ್ ಕೃಷ್ಣೋಜಿರಾವ್ ಪತ್ನಿ.