ಮಡಿಕೇರಿ ಜೂ. 2: ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಕಳೆದ ನಾಲ್ಕು ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿದ್ದ ತಾವು ಈ ಸ್ಥಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿರುವದಾಗಿ ತಿಳಿಸಿದರು.
ಸಭೆಯಲ್ಲಿ ನೂತನ ಸಮಿತಿಗೆ ನಿವೃತ್ತ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ಬಿದ್ದಂಡ ಕಾವೇರಿ ನಂಜಪ್ಪ, ಕವಿತಾ ಮುತ್ತಣ್ಣ ಮೊದಲಾದವರ ಹೆಸರುಗಳನ್ನು ಸೂಚಿಸಲಾಯಿತು. ಮುಂದಿನ 15 ದಿನಗಳಲ್ಲಿ ನೂತನ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.
ಮೇಜರ್ ಜನರಲ್ ಬಾಚಮಾಡ ಎ. ಕಾರ್ಯಪ್ಪ ತಮ್ಮ ಕಾಲೇಜು ದಿನಗಳನ್ನು ಸ್ಮರಿಸಿಕೊಂಡರು. ಅಲ್ಲದೆ ಸೇನೆಯಲ್ಲಿನ ಅನುಭವಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಕಾಲೇಜಿನ ಅಗತ್ಯತೆÉ ಬಗ್ಗೆ ವಿವರಿಸಿದರು. ಶೋಭಾ ಸುಬ್ಬಯ್ಯ ಸರ್ವರನ್ನು ಸ್ವಾಗತಿಸಿ, ಸಭಾ ಕಾರ್ಯಕ್ರಮದ ನಂತರ ಸಾಂಪ್ರದಾಯಿಕ ಕ್ರೀಡಾಕೂಟ ನಡೆಯಿತು. ಶ್ಯಾಮ್ ಪೂಣಚ್ಚ ವಂದಿಸಿದರು.