ಶನಿವಾರಸಂತೆ, ಜೂ. 2: ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 11 ದಿನಗಳಿಂದ ನಡೆಯುತ್ತಿರುವ ಸಿರಿ ಹಬ್ಬ, ಸಿರಿ ಉತ್ಪನ್ನಗಳ, ಸಿದ್ಧ ಉಡುಪುಗಳ ಮಾರಾಟ ಮತ್ತು ಪ್ರದರ್ಶನ ಮೇಳ ಮುಕ್ತಾಯಗೊಂಡಿದೆ.
ಸಿರಿ ಉತ್ಪನ್ನಗಳ ಸಿರಿ ಹಬ್ಬ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಸ್ವದೇಶಿ ವಸ್ತುಗಳ ಪರಿಚಯದೊಂದಿಗೆ ಅವುಗಳ ಮಾರಾಟ ಭರದಿಂದ ಸಾಗಿದೆ. ಆರೋಗ್ಯ ವರ್ಧಕ ಹಾಗೂ ಮಧುಮೇಹ ನಿರೋಧಕ ಶಕ್ತಿಯನ್ನು ಹೊಂದಿರುವ ಸಿರಿ ಧಾನ್ಯ ಗ್ರಾಮೀಣ ಜನತೆಯ ಮೆಚ್ಚುಗೆ ಗಳಿಸಿದೆ.