ಗೋಣಿಕೊಪ್ಪ ವರದಿ, ಮೇ 31 : ಹಾಕಿ ಇಂಡಿಯಾ ವತಿಯಿಂದ ಹರಿಯಾಣದ ಹಿಸ್ಸಾರ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸಬ್‍ಜೂನಿಯರ್ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ 3 ನೇ ಪಂದ್ಯದಲ್ಲೂ ಸೋಲನುಭವಿಸುವ ಮೂಲಕ ಮತ್ತೆ ನಿರಾಸೆ ಅನುಭವಿಸಿದೆ.

ತನ್ನ 3 ನೇ ಪಂದ್ಯದಲ್ಲಿ ಆಂದ್ರಪ್ರದೇಶದ ವಿರುದ್ಧ 1-6 ಗೋಲುಗಳ ಅಂತರದಿಂದ ಸೋಲನುಭವಿಸಿತು. ಕೂರ್ಗ್ ಪರ 51 ನೇ ನಿಮಿಷದಲ್ಲಿ ಕೆ. ಎಸ್. ಸುರಕ್ಷಾ ಏಕೈಕ ಗೋಲು ಹೊಡೆದರು. ಆಂದ್ರಪ್ರದೇಶ ಪರ 1 ರಲ್ಲಿ ರೋಹಿಣಿ, 6 ಹಾಗೂ 20 ರಲ್ಲಿ ಜಾನ್ಸಿ ಬಬ್ಲಿ, 28 ಹಾಗೂ 57 ರಲ್ಲಿ ಗಾಯತ್ರಿ, 41 ರಲ್ಲಿ ರೇವತಿ ಗೋಲು ಹೊಡೆದರು. ಆಡಿದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವ ಹಾಕಿಕೂರ್ಗ್ ತಂಡವು ಜೂನ್ 1 ರಂದು ಸ್ಪೋಟ್ರ್ಸ್ ಅಥಾರಿಟಿ ತಂಡವನ್ನು ಎದುರಿಸಲಿದೆ. -ಸುದ್ದಿಪುತ್ರ