ಸೋಮವಾರಪೇಟೆ, ಮೇ 31: ಲೋಕಸಭಾ ಚುನಾವಣೆ ಹಿನ್ನೆಲೆ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲಾಗಿದ್ದ ಬಂದೂಕುಗಳನ್ನು ವಾರಸುದಾರರಿಗೆ ನೀಡಲು ಕ್ರಮ ವಹಿಸಲಾಗಿದ್ದು, ಮಾಲೀಕರು ತಮ್ಮ ಬಂದೂಕುಗಳನ್ನು ಪಡೆದುಕೊಳ್ಳ ಬಹುದಾಗಿದೆ.
ಚುನಾವಣಾ ನೀತಿ ಸಂಹಿತೆ ತೆರವಾದ ಹಿನ್ನೆಲೆ ಜಿಲ್ಲಾಧಿಕಾರಿ ಗಳಿಂದ ಈ ಬಗ್ಗೆ ಆದೇಶ ಬಂದಿದ್ದು, ಬಂದೂಕು ಠೇವಣಿದಾರರು ಆಯಾ ಠಾಣೆಗಳಿಗೆ ಆಗಮಿಸಿ ತಮ್ಮ ಬಂದೂಕುಗಳನ್ನು ವಾಪಸ್ ಪಡೆದುಕೊಳ್ಳಬಹುದೆಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.