ವೀರಾಜಪೇಟೆ, ಮೇ 31: ವೀರಾಜಪೇಟೆ ತಾಲೂಕು ಗ್ರಾಮ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಎರಡು ಸ್ಥಾನಗಳು ಬಿಜೆಪಿ ಪಾಲಾಗಿದೆ.ಅಮ್ಮತ್ತಿ ಬಳಿಯ ಕಣ್ಣಂಗಾಲ ಗ್ರಾಮ ಪಂಚಾಯಿತಿ ಹಚ್ಚಿನಾಡು ಕ್ಷೇತ್ರದ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ರಾಣಿ ಮಣಿ 219ಮತಗಳನ್ನು ಗಳಿಸಿ ಆಯ್ಕೆಯಾಗಿ ದ್ದಾರೆ. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಶಾಂತಿ 122 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ.
ತಾ. 29ರಂದು ನಡೆದ ಹಚ್ಚಿನಾಡು ಕ್ಷೇತ್ರದಲ್ಲಿ ಒಟ್ಟು 642 ಮತದಾರರಿದ್ದು 358 ಮಂದಿ ಮತದಾರರು ಮತ ಚಲಾಯಿಸಿದ್ದರು. ಹಾತೂರು ಗ್ರಾಮ ಪಂಚಾಯಿತಿಯ ಕೊಳತೋಡು ಬೈಗೋಡು ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಜೆ.ಕೆ.ಸುರೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಹಚ್ಚಿನಾಡು ಕ್ಷೇತ್ರದ ಮತ ಎಣಿಕೆಯು ಇಂದು ತಾಲೂಕು ಕಚೇರಿಯ ಚುನಾವಣಾ ಸಭಾಂಗಣ ದಲ್ಲಿ ನಡೆದಿದ್ದು ಚುನಾವಣಾಧಿಕಾರಿ ಗಳಾಗಿ ದೇವಣಗೇರಿ ಶಾಲೆಯ ಲೋಕೇಶ್ ಹಾಗೂ ತಾಲೂಕು ಕಚೇರಿಯ ಶಿರಸ್ತೆದಾರ್ ಪ್ರವೀಣ್ ಕಾರ್ಯ ನಿರ್ವಹಿಸಿದರು.ಹಚ್ಚಿನಾಡು ಕ್ಷೇತ್ರದ ಸ್ಥಾನ ಬಿಜೆಪಿಯ ಪಾಲಾದುದರಿಂದ ಮತ ಎಣಿಕೆಯ ನಂತರ ಪಕ್ಷದ ಕಾರ್ಯಕರ್ತರಾದ ಮಧು ದೇವಯ್ಯ, ಪಿ.ಬೋಪಣ್ಣ ಹಾಗೂ ಕಾರ್ಯ ಕರ್ತರು ಸಂಭ್ರಮಿಸಿದರು.