ವೀರಾಜಪೇಟೆ, ಮೇ31: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೀರಾಜಪೇಟೆ ನೆಹರೂನಗರದ ಪಿ.ಶಂಕರ್ ರೂ 20,000, ಬೀಳೂರು ಪೊನ್ನಪ್ಪಸಂತೆಯ ಪಿ.ಎಂ.ಚಿಕ್ಕಣ್ಣ ಎಂಬವರಿಗೆ ರೂ 28,000 ಹಾಗೂ ಚೆನ್ನಯ್ಯನಕೋಟೆಯ ಪುರುಷೊತ್ತಮ್ ಎಂಬವರಿಗೆ ರೂ. 35000ವನ್ನು ಚಿಕಿತ್ಸೆಗಾಗಿ ಚೆಕ್ಗಳನ್ನು ಶಾಸಕ ಕೆ.ಜಿ.ಬೋಪಯ್ಯ ಅವರು ವಿತರಿಸಿದರು. ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಈ ಚೆಕ್ಗಳನ್ನು ಇಂದು ಇಲ್ಲಿನ ಶಾಸಕರ ಕೊಠಡಿಯಲ್ಲಿ ವಿತರಿಸಲಾಯಿತು.