ಮಡಿಕೇರಿ, ಮೇ 31: ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆಯ ವತಿಯಿಂದ ಜೂನ್ 4 ರಂದು ಕುಟ್ಟ ಕೊಡವ ಸಮಾಜದಲ್ಲಿ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆ, ಆಗಬೇಕಾದ ಕೆಲಸ ಕಾರ್ಯಗಳ ಕುರಿತಾಗಿ ಚರ್ಚಿಸಿ ವಿವಿಧ ತೀರ್ಮಾನ ಕೈಗೊಳ್ಳಲಾಗುವದು. ರೈತರು ತಮ್ಮ ಸಮಸ್ಯೆಗಳನ್ನು ಅರ್ಜಿಯ ಮೂಲಕ ಸಭೆಗೆ ತಲಪಿಸು ವಂತೆ ಸ್ಥಳೀಯ ಹಿರಿಯರಾದ ಮಾಚಿಮಾಡ ಸುಬ್ಬಯ್ಯ ಅವರು ಕೋರಿದ್ದಾರೆ.