ಕೂಡಿಗೆ, ಜೂ. 1: ದಂಡಿನಮ್ಮ ಮತ್ತು ಬಸವೇಶ್ವರ ಹಾಗೂ ಮುತ್ತತರಾಯ ಮತ್ತು ಗ್ರಾಮಗಳ ಸೇವಾ ಸಮಿತಿ ವತಿಯಿಂದ ಮುತ್ತತರಾಯ ಹರಿ ಸೇವೆ ಪೂಜೆ ಕಾರ್ಯಕ್ರಮ ನಡೆಯಿತು.
ಮೊದಲು ಮುತ್ತತರಾಯ ಸ್ವಾಮಿ ವಿಗ್ರಹವನ್ನು ಕಾವೇರಿ ನದಿಯಲ್ಲಿ ಗಂಗಸ್ನಾನ ನೆರವೆರಿಸಿ ನಂತರ ಪೂಜಾ ವಿಧಿವಿಧಾನಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಪೂಜೆ ಸಲ್ಲಿಕೆÉ ನಂತರ ತಮ್ಮ ಬನಕ್ಕೆ ಬಂದು ಪೂಜಾಕೈಂಕರ್ಯ ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನದಾನ. ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ. ಸೋಮಶೇಖರ್, ಉಪಾಧ್ಯಕ್ಷ ಗಿರೀಶ್ ಗೌಡ, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ ಗೌರವ ಅಧ್ಯಕ್ಷ ಕೆ.ಟಿ. ಶ್ರೀನಿವಾಸ. ಕೆ.ಎಸ್. ಕಾಂತರಾಜು, ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.