ವೀರಾಜಪೇಟೆ, ಮೇ 27: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆಯ 2019-24ನೇ ಅವಧಿಗೆ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ತಾಲೂಕು ಸಂಘದ ಅಧ್ಯಕ್ಷರು, ಖಜಾಂಜಿ, ರಾಜ್ಯ ಪರಿಷತ್ ಸದಸ್ಯರ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು ಸಂಘದ ನಿಯಮಾವಳಿಯ ಅನ್ವಯ ಜೂನ್ 13 ರಂದು ಚುನಾವಣೆ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ಬಿ.ಎಸ್. ಗುರುರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಮಪತ್ರ ವಿತರಣೆ ತಾ. 27ರಿಂದ ಜೂನ್ 3ರ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ನಾಮಪತ್ರ ಪರಿಶೀಲನೆ ಜೂನ್ 3ರಂದು ಸಂಜೆ 5.30 ಗಂಟೆಗೆ. ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ ಜೂನ್ 3ರ ನಾಮಪತ್ರ ಪರಿಶೀಲನೆ ನಂತರ. ಜೂನ್ 4 ಸಂಜೆ 4 ಗಂಟೆಯವರೆಗೆ ನಾಮಪತ್ರ ವಾಪಾಸ್ಸು ಪಡೆಯಲು ಅವಕಾಶವಿದೆ. ಜೂನ್ 13 ರಂದು ಬೆಳಿಗ್ಗೆ 11 ರಿಂದ ಸಂಜೆ 4.30 ಗಂಟೆಯವರೆಗೆ ಚುನಾವಣೆ ನಡೆಯಲಿದೆ. 5 ಗಂಟೆಯ ನಂತರ ಮತ ಎಣಿಕಾ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಎ.ವಿ ಮಂಜುನಾಥ್, ನಿರ್ದೇಶಕರಾದ ಎ.ಬಿ ಲಿಲತಾ ಉಪಸ್ಥಿತರಿದ್ದರು.