ಶನಿವಾರಸಂತೆ, ಮೇ 27: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ತಾ. 28ರಂದು (ಇಂದು) ನಡೆಯಲಿದೆ. ಈ ವಾರ್ಷಿಕ ಮಹೋತ್ಸವದಲ್ಲಿ ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎ. ವಿಲಿಯಂ ಪಾಲ್ಗೊಳ್ಳಲಿದ್ದಾರೆ.
ಅಂದು ಸಂಜೆ 5 ಗಂಟೆಯಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಗಳು ಆರಂಭವಾಗುವದು. ಸಂತ ಅಂತೋಣಿಯವರ ಮೆರವಣಿಗೆ ಮುಖ್ಯ ಬೀದಿಯಲ್ಲಿ ನಡೆಯಲಿದೆ. ನಂತರ ಸಹಭೋಜನ ಏರ್ಪಡಿಸಲಾಗಿದೆ ಎಂದು ಫಾದರ್ ಡೇವಿಡ್ ಸಗಾಯ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.