ಮಡಿಕೇರಿ, ಮೇ 27: ಕೊಡಗು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮಾತೃಶ್ರೀ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಮೂರು ತಾಲೂಕಿನ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಬಿಪಿಲ್ ಕುಟುಂಬದ ಗರ್ಭಿಣಿ ಮಹಿಳೆಯರಿಗೆ (7 ತಿಂಗಳು ತುಂಬಿದ ಗರ್ಭಿಣಿ ಮಹಿಳೆಯರು) ಮೊದಲ 02 ಜೀವಂತ ಹೆರಿಗೆಗೆ ನೀಡುವ ಸೌಲಭ್ಯವಾಗಿದ್ದು ರೂ.6 ಸಾವಿರ ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಎಪಿಎಲ್ ಮತ್ತು ಬಿಪಿಎಲ್ ಕುಟುಂಬದ ಮೊದಲ ಪ್ರಸವದ ಗರ್ಭಿಣಿ/ ಬಾಣಂತಿ ಮಹಿಳೆ ಯರಿಗೆ ನೀಡುವ ಸೌಲಭ್ಯವಾಗಿದ್ದು ರೂ.5 ಸಾವಿರ ಗಳನ್ನು ಮೂರು ಕಂತುಗಳಲ್ಲಿ ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಅರ್ಜಿದಾರರು ಒದಗಿಸಬೇಕಾದ ದಾಖಲೆಗಳು: ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ್ ಪ್ರತಿ. ತಾಯಿ ಮತ್ತು ಶಿಶು ರಕ್ಷಣಾ ಕಾರ್ಡ್. ಪತಿಯ ಆಧಾರ್ ಕಾರ್ಡ್ ಪ್ರತಿ. ಫಲಾನುಭವಿಯ ಬ್ಯಾಂಕ್ ಖಾತೆಯ ವಿವರ. ಬಿಪಿಎಲ್ ಕಾರ್ಡ್/ಎಪಿಎಲ್ ಕಾರ್ಡ್ ಪ್ರತಿ.
ನೋಂದಣಿ ಅಭಿಯಾನ ನಡೆಸುವ ದಿನಾಂಕ ಮತ್ತು ಸ್ಥಳಗಳ ವಿವರ: ತಾ. 29 ರಂದು ವೀರಾಜಪೇಟೆ ತಾಲೂಕು ಆಸ್ಪತ್ರೆ, ತಾ. 30 ರಂದು ಸೋಮವಾರಪೇಟೆ ತಾಲೂಕು ಆಸ್ಪತ್ರೆ ಹಾಗೂ ತಾ. 31 ರಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಭಿಯಾನ ನಡೆಯಲಿದೆ.
ಮಡಿಕೇರಿ ತಾಲೂಕು: ಜೂನ್ 3 ರಂದು ನಗರದ ದಾಸವಾಳ ಬೀದಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜೂ. 4ರಂದು ಗಾಂಧಿನಗರ, ಜೂ.6 ರಂದು ಇಂದಿರಾನಗರ, ಜೂ.7 ರಂದು ಭಾಗಮಂಡಲ, ಜೂ.10 ರಂದು ಸಂಪಾಜೆ, ಜೂ. 11 ರಂದು ಚೆಯ್ಯಂಡಾಣೆ, ಜೂ.12 ರಂದು ಬೇಂಗೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಭಿಯಾನ ನಡೆಯಲಿದೆ.
ಸೋಮವಾರಪೇಟೆ ತಾಲೂಕು: ಜೂನ್ 13 ರಂದು ಕೊಡ್ಲಿಪೇಟೆ, ಜೂ. 14 ರಂದು ಶನಿವಾರಸಂತೆ, ಜೂ. 15 ರಂದು ಆಲೂರು ಸಿದ್ದಾಪುರ, ಜೂ. 17ರಂದು ಮಾದಾಪುರ, ಜೂ. 18 ರಂದು ಶಾಂತಳ್ಳಿ, ಜೂ. 19 ರಂದು ಗರ್ವಾಲೆ, ಜೂ. 20 ರಂದು ಸೂರ್ಲಬ್ಬಿ, ಜೂ. 21 ರಂದು ಸುಂಟಿಕೊಪ್ಪ, ಜೂ. 22 ರಂದು ಚೆಟ್ಟಳ್ಳಿ, ಜೂ. 24 ರಂದು ನಂಜರಾಯಪಟ್ಟಣ, ಜೂ. 25 ರಂದು ಕೂಡಿಗೆ, ಜೂ. 26 ರಂದು ಶಿರಂಗಾಲ, ಜೂ. 27 ರಂದು ಹೆಬ್ಬಾಲೆ ಪ್ರಾಥಮಿಕ ಕೇಂದ್ರಗಳಲ್ಲಿ ಅಭಿಯಾನ ನಡೆಯಲಿದೆ.
ವೀರಾಜಪೇಟೆ ತಾಲೂಕು: ಜೂನ್, 28 ರಂದು ಕಾಕೋಟು ಪರಂಬು, ಜೂ.29 ರಂದು ತಿತಿಮತಿ, ಜುಲೈ, 1 ರಂದು ಬಾಳೆಲೆ, ಜು. 2 ರಂದು ಪಾಲಿಬೆಟ್ಟ , ಜು. 3 ರಂದು ಹುದಿಕೇರಿ, ಜು. 4 ರಂದು ಕುಟ್ಟ, ಜು. 5 ರಂದು ಕಾನೂರು, ಜು. 6 ರಂದು ಕುಟ್ಟಂದಿ, ಜು. 8 ರಂದು ಮಾಲ್ದಾರೆ, ಜು. 9 ರಂದು ಅಮ್ಮತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ನೋಂದಣಿ ಅಭಿಯಾನ ನಡೆಯಲಿದೆ.
ಜಿಲ್ಲೆಯ ಎಲ್ಲಾ ಅರ್ಹ ಗರ್ಭಿಣಿ, ಬಾಣಂತಿಯರು ಅಭಿಯಾನಕ್ಕೆ ಬಂದು ನೊಂದಣಿ ಮಾಡಿಕೊಂಡು ಯೋಜನೆಗಳ ಸೌಲಭ್ಯ ಪಡೆಯುವಂತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.