ಮಡಿಕೇರಿ, ಮೇ 27: ಕಳೆದ 9 ತಿಂಗಳುಗಳ ಹಿಂದೆ ಕೊಡಗಿನಲ್ಲಿ ಕಂಡುಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿದ ಪರಿಣಾಮ; ಮನೆ, ಕೊಟ್ಟಿಗೆ, ಗದ್ದೆ, ತೋಟ, ಕೃಷಿ ಫಸಲು ಇತ್ಯಾದಿ ಹಾನಿಗೊಂಡು ಸರಕಾರದಿಂದ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರೂ ಇದುವÀರೆಗೆ ತಮಗೆ ಯಾವದೇ ನೆರವು ಲಭಿಸಿಲ್ಲ ಎಂದು ಇಂದು ನೂರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಜಿಲ್ಲಾಡಳಿತದ ಗಮನ ಸೆಳೆದರು.ಜಿಲ್ಲಾ ಆಡಳಿತ ಭವನದ ದ್ವಿತೀಯ ಮಹಡಿಯ 32ನೇ ಕೊಠಡಿ ಸಭಾಂಗಣದಲ್ಲಿ ಈ ಸಂಬಂಧ ಸ್ವತಃ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಉಪವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ, ನಷ್ಟ ಪರಿಹಾರ ಸಂಬಂಧ ಅರ್ಜಿಗಳ ಪರಿಶೀಲನೆಗೆ ಆಯ ತಾಲೂಕು ತಹಶೀಲ್ದಾರರು, ಕಂದಾಯ ಅಧಿಕಾರಿಗಳು ಇತರ ಸಿಬ್ಬಂದಿಗಳನ್ನು ನಿಯೋಜಿಸಿದ್ದರು.ಒಂದೆಡೆ 5 ಗಣಕ ಯಂತ್ರಗಳ ಸಹಿತ; ಪರಿಹಾರ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಣೆ ಸಂಬಂಧ ಸಿಬ್ಬಂದಿಗಳನ್ನು ನಿಯೋಜಿಸಿ ಪರಿಶೀಲಿಸುವ ಕೆಲಸ ಸಾಗಿತ್ತು. ಮತ್ತೊಂದೆಡೆ ದೂರುದಾರರ ಅರ್ಜಿಗಳು, ನಷ್ಟ ಮತ್ತು ಪರಿಹಾರ ಕಾರ್ಯದ ಸಮೀಕ್ಷೆ ವರದಿ ಇತ್ಯಾದಿ ದಾಖಲಾತಿಗಳ ಪರಿಶೀಲನೆ ನಡೆಸಿ; ಸಂಬಂಧಪಟ್ಟವರಿಗೆ ಆಡಳಿತಾತ್ಮಕ ವಾಗಿ ಕಲ್ಪಿಸಿರುವ ಪರಿಹಾರದ ಬಗ್ಗೆ ಪ್ರತ್ಯಕ್ಷ ಮಾಹಿತಿಯನ್ನು ಒದಗಿಸುವ ಕೆಲಸ ಸಾಗಿತ್ತು.
ಮತ್ತೊಂದೆಡೆ ಇದುವರೆಗೆ ಯಾವದೇ ಪರಿಹಾರ ಲಭಿಸಿಲ್ಲವೆಂಬ ದೂರುದಾರರ ಬಳಿ ಅಗತ್ಯ ಮಾಹಿತಿ ಪಡೆದು ನಷ್ಟದ ಬಾಬ್ತು ಹೊಸ ಅರ್ಜಿಗಳನ್ನು ಸ್ವೀಕರಿಸಿದ ಸಂಬಂಧಪಟ್ಟವರ ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ಪ್ರತ್ಯೇಕ ನೋಂದಾಯಿ ಸಿಕೊಳ್ಳುತ್ತಿದ್ದದ್ದು ಗೋಚರಿಸಿತು.
ಈ ರೀತಿಯಲ್ಲಿ ಪರಿಪೂರ್ಣ ಮಾಹಿತಿಯನ್ನು ಪಡೆದು ಅನಂತರದಲ್ಲಿ; ಇಲಾಖೆಯ ಆಯ ವಿಭಾಗಗಳ ಸಿಬ್ಬಂದಿಯಿಂದ ನಷ್ಟದ ವಾಸ್ತವ ಮಾಹಿತಿ ಸಂಗ್ರಹದೊಂದಿಗೆ ನ್ಯಾಯ ಸಮ್ಮತ ಪರಿಹಾರ ಒದಗಿಸಲು ಅಧಿಕಾರಿಗಳ ಪ್ರಯತ್ನ ನಡೆಯಿತು. ಹೀಗೆ ನಿರಂತರ ಏಳು ಗಂಟೆಗಳ ಸಮಯ ಅಧಿಕಾರಿ - ಸಿಬ್ಬಂದಿ ಜನತೆಯ ಅಹವಾಲು ಸ್ವೀಕರಿಸಿದರು.
ಇಂದಿನಿಂದ ತಾ. 29ರ ತನಕ ನಿತ್ಯವೂ ಬೆಳಿಗ್ಗೆ 10.30 ರಿಂದ 5.30ರ ತನಕ; ಈ ಪರಿಹಾರ ಅದಾಲತ್ ನಡೆಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದು, ಸಣ್ಣ ಪುಟ್ಟ ಲೋಪಗಳನ್ನು ಈ ಅದಾಲತ್ ಮುಖಾಂತರ ಪರಿಹರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಈಗಾಗಲೇ ಶೇ. 90 ರಷ್ಟು ಫಲಾನುಭವಿಗಳಿಗೆ ನಷ್ಟ ಪರಿಹಾರ ಅವರವರ ಖಾತೆಗಳಿಗೆ ಜಮೆಗೊಂಡಿದ್ದು, ಶೇ. 10 ರಷ್ಟು ಮಂದಿಗೆ ತಾಂತ್ರಿಕ ಕಾರಣದಿಂದ ಸಮಸ್ಯೆ ಉಂಟಾಗಿ ಪರಿಹಾರ ಹಣ ಬ್ಯಾಂಕ್ಗಳಲ್ಲಿ ಜಮಾವಣೆಗೊಳ್ಳದಿರ ಬಹುದು ಎಂದು ಅಭಿಪ್ರಾಯಪಟ್ಟರು.
ಪರಿಹಾರ ವಿತರಣೆ ಸಂಬಂಧಿಸಿದಂತೆ ಈಗಾಗಲೇ hಣಣಠಿ://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಶೇ.90ರಷ್ಟು ಪರಿಹಾರ ತಲಪಿದೆ. ಇನ್ನೂ ಶೇ.10 ರಷ್ಟು ಪರಿಹಾರ ಸಂತ್ರಸ್ತರಿಗೆ ತಲಪದಿದ್ದಲ್ಲಿ ಅಂತಹ ಸಂತ್ರಸ್ತರು ಮೇ, 29 ರವರೆಗೆ ನಡೆಯುವ ಪರಿಹಾರ ಅದಾಲತ್ನಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು ಕೊಚ್ಚಿ ಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು ಇನ್ನೂ ಕೆಲವು ಭಾಗಗಳಲ್ಲಿ
(ಮೊದಲ ಪುಟದಿಂದ) ಅತಿಯಾದ ಮಳೆಯಿಂದ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿತ್ತು.
ಹೀಗೆ ಪ್ರಕೃತಿ ವಿಕೋಪದಿಂದ ಬೆಳೆಹಾನಿ ಪ್ರಕರಣಗಳಲ್ಲಿ ಸರ್ಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿರುತ್ತದೆ. ಮನೆಹಾನಿ ಪ್ರಕರಣಗಳಲ್ಲಿ ಪೂರ್ಣ, ತೀವ್ರ ಮನೆಹಾನಿ ಸಂತ್ರಸ್ತರನ್ನು ಮೊದಲ ಪಟ್ಟಿಯಲ್ಲಿ ಮತ್ತು ವಾಸಿಸಲು ಯೋಗ್ಯವಲ್ಲದ ಪ್ರದೇಶದಲ್ಲಿರುವ ಮತ್ತು ಅಪಾಯದ ಪ್ರದೇಶದಲ್ಲಿರುವ ಮನೆಗಳ ಸಂತ್ರಸ್ತರನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲ ಪಟ್ಟಿಯಲ್ಲಿರುವ ಪೂರ್ಣ, ತೀವ್ರ ಮನೆಹಾನಿ ಪ್ರಕರಣಗಳಿಗೆ ನವೆಂಬರ್-2018 ರಿಂದ ಬಾಡಿಗೆ ಹಣವನ್ನು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಬೆಳೆ ಪರಿಹಾರ ಸಂಬಂಧದ ಮಾಹಿತಿಯನ್ನು hಣಣಠಿ://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಆಧಾರ್ ಸಂಖ್ಯೆ ದಾಖಲಿಸುವ ಮುಖಾಂತರ ಪಡೆಯ ಬಹುದಾಗಿದೆ. ಹಾಗೆಯೇ ಮನೆಹಾನಿ, ಮನೆ ಬಾಡಿಗೆ ಮತ್ತು ಬೆಳೆಹಾನಿ ಪರಿಹಾರ ಸಂಬಂಧ ತಾ. 29 ರವರೆಗೆ ಮೂರು ದಿನಗಳ ಕಾಲ ಪರಿಹಾರ ಅದಾಲತ್ನ್ನು ಜಿಲ್ಲಾಡಳಿತ ಭವನದ ಎರಡನೇ ಮಹಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಮನೆಹಾನಿ ಮತ್ತು ಬೆಳೆಹಾನಿ ಪರಿಹಾರದ ಬಗ್ಗೆ ಯಾವದೇ ಗೊಂದಲ ಗಳಿದ್ದಲ್ಲಿ ಈ ಪರಿಹಾರ ಅದಾಲತ್ಗೆ ಹಾಜರಾಗಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.