ಮಡಿಕೇರಿ, ಮೇ 27: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ದೊರಕಿರುವ ಗೆಲವು ಭಾರತದಲ್ಲಿ ಜಾತ್ಯತೀತ ರಾಜಕೀಯದ ಅಂತಿಮ ಸೋಲಲ್ಲ, ಬದಲಾಗಿ ಭಾವನಾತ್ಮಕ ಪ್ರಚಾರದ ಯಶಸ್ಸು ಮತ್ತು ಆರ್‍ಎಸ್‍ಎಸ್, ಬಿಜೆಪಿ ತಂತ್ರಗಾರಿಕೆಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳಲು ಜಾತ್ಯತೀತ ಪಕ್ಷಗಳು ವಿಫಲವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.

ಈ ವೈಫಲ್ಯದ ಹೊರತಾಗಿಯೂ ಜಾತ್ಯತೀತ, ಪ್ರಜಾಸತ್ತಾತ್ಮಕ, ಸಮಾಜವಾದಿ ಗಣರಾಜ್ಯ ಭಾರತವೆಂಬ ಕಲ್ಪನೆಯು ಉಳಿಯಲಿದೆ ಎಂದು ಸಭೆ ಹೇಳಿದೆ.

ಚುನಾವಣೆಯು ಎಲ್ಲರ ಕಣ್ಣನ್ನು ತೆರೆಸಬೇಕು, ಹೊಣೆಗಾರಿಕೆಯ ಸರಕಾರ ಮತ್ತು ಜವಾಬ್ದಾರಿಯುತ ವಿರೋಧ ಪಕ್ಷದ ಮೂಲಕ ಮಾತ್ರವೇ ಪ್ರಜಾಸತ್ಯತೆಯು ಉಳಿಯಬಹುದು, ಅವೆರಡೂ ಜನತೆಯ ಹಕ್ಕನ್ನು ರಕ್ಷಿಸಲು ಮತ್ತು ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡಲು ಹೊಣೆಗಾರರಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.