ಮಡಿಕೇರಿ, ಮೇ 26: ಪ್ರಸಕ್ತ 2019-20ನೇ ಸಾಲಿನ ಮಡಿಕೇರಿ ತಾಲೂಕು ವ್ಯಾಪ್ತಿ ಬರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಹತ್ತಿರ, ತಾಲೂಕು ಪಂಚಾಯಿತಿ ಹಾಗೂ ಮಹಿಳಾ ಹೊಲಿಗೆ ಕೇಂದ್ರ ಮೂರ್ನಾಡು ಇಲ್ಲಿಗೆ ಪ್ರವೇಶ ಕೋರಿ ಅರ್ಹ ನಿರುದ್ಯೋಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಹೊಲಿಗೆ ತರಬೇತಿ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೆಕು. ಅಭ್ಯರ್ಥಿಯ ವಯಸ್ಸು 15 ವರ್ಷಕ್ಕಿಂತ ಮೇಲ್ಪಟ್ಟು ಹಾಗೂ 35 ವರ್ಷಗಳ ಒಳಗಿರಬೇಕು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳ ಕುಟುಂಬ ವಾರ್ಷಿಕ ಆದಾಯ ರೂ. 1 ಲಕ್ಷಗಳನ್ನು ಮೀರಬಾರದು. ಪ್ರವರ್ಗ 1ರ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಅಭ್ಯರ್ಥಿಗಳ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷಗಳನ್ನು ಮೀರಬಾರದು. ಈ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದುಕೊಂಡಿರುವ ಕುಟುಂಬಗಳ ಅಭ್ಯರ್ಥಿಗಳಿಗೆ ಅವಕಾಶ ಇರುವದಿಲ್ಲ. 2019-20ನೇ ಸಾಲಿನಲ್ಲಿ ಹೊಲಿಗೆ ತರಬೇತಿ ಕೇಂದ್ರ ಮಡಿಕೇರಿ ನಗರ ಹಾಗೂ ಮೂರ್ನಾಡುವಿನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಮಹಿಳಾ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಗಳನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಮಡಿಕೇರಿ ತಾಲೂಕು, ತಾಲೂಕು ಪಂಚಾಯಿತಿ ಹತ್ತಿರ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಬಳಿ ಮಡಿಕೇರಿ ಇವರಿಂದ ಕಚೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಿ ಜೂನ್ 15 ರ ಒಳಗೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಮಡಿಕೇರಿ ತಾಲೂಕು ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 9448205919/08272-298037ನ್ನು ಸಂಪರ್ಕಿಸಬಹುದು.