ಮಡಿಕೇರಿ, ಮೇ 26: ಮೂರ್ನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಸೇವಾ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾಯಾಗ ಹಾಗೂ ನೃತ್ಯೋತ್ಸವ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ರಂಗಪೂಜೆ, ಪಾರಾಯಣ, ಚಂಡಿಕಾ ಪಾರಾಯಣ, ಅಷ್ಟಾವದಾನ ಸೇವೆ, ಅಲಂಕಾರ ಪೂಜೆ ಹಾಗೂ ಚಂಡಿಕಾ ಯಾಗ ನಡೆಯಿತು.

ಈ ಸಂದರ್ಭ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚೈತ್ರಾ ಕುಂದಾಪುರ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಹಿಳೆಯರು ಸೇರಿ ದೇವಾಲಯವನ್ನು ನಡೆಸುತ್ತಿರುವದು ಗಮನಾರ್ಹ ಎಂದು ಅಭಿಪ್ರಾಯಪಟ್ಟರು.

ನಮ್ಮ ದೇಶದ ಆಚಾರ, ವಿಚಾರವನ್ನು ಉಳಿಸಿ ಬೆಳೆಸಿ ಕೊಂಡು ಹೋಗುವಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿದೆ. ಇದನ್ನು ಮರೆತರೆ ಭಾರತೀಯ ಸಂಸ್ಕøತಿ ಪತನಗೊಳ್ಳುವದರಲ್ಲಿ ಸಂಶಯವಿಲ್ಲ ಎಂದರು.

ದೇವಾಲಯದ ಸಂಸ್ಥಾಪಕ ಮಹಾಭಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾರತೀಯ ಸೇನಾ ಪಡೆಯ ಯೋಧ ಹೆಚ್.ಆರ್. ರಾಜೇಶ್ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಅನ್ನಪೂರ್ಣೇಶ್ವರಿ ದೇವಾಲಯದ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಶಾಲೆಯ ವಿದ್ಯಾರ್ಥಿ ಗಳಿಂದ ನೃತ್ಯೋತ್ಸವ ನಡೆಯಿತು.

ಕುಮಾರಿ ಕಾವ್ಯಶ್ರೀ, ರಂಗಭೂಮಿ ಕಲಾವಿದ ಎಂ.ಆರ್. ಚಂದ್ರಶೇಖರ್ ಹಾಗೂ ಕಾಂತೂರಿನ ತಬಲವಾದಕ ಕೆ.ವಿ. ಚಂದ್ರು ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ನೃತ್ಯ ಶಿಕ್ಷಕಿ ಹೇಮಾವತಿ ಕಾಂತರಾಜ್, ಪ್ರಮುಖರಾದ ಗ್ರೇಸಿ ವಿಜಯ ಮತ್ತು ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಬಿ. ಯಶೋದ, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಹಾಗೂ ಪ್ರಮುಖರಾದ ಜಯಂತಿ ಲವಕುಮಾರ್ ಮತ್ತು ಸೇವಾ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.