ಇದು ರವೆಯಲ್ಲೇ ತಯಾರಿಸುವ ರುಚಿಕರ ವಾದ ಒಂದು ತಿನಿಸು. ಇದನ್ನು ತಯಾರಿಸಲು 1 ಕಪ್ ರವೆ, ಅರ್ಧ ಕಪ್ ತುಪ್ಪ, ಸಕ್ರೆ (ನಿಮಗೆ ಬೇಕಾಗುವ ಸಿಹಿಗೆ) ಗೇರುಬೀಜ ಹಾಗೂ ಒಣದ್ರಾಕ್ಷಿ, ಸ್ವಲ್ಪ. ಮೊದಲು ಒಂದು ಪಾನ್ ಅನ್ನು ಒಲೆಯ ಮೇಲಿರಿಸಿ, ತುಪ್ಪ ಹಾಕಿ, ಗೇರುಬೀಜ, ಒಣ ದ್ರಾಕ್ಷಿಯನ್ನು ಹುರಿದು ತೆಗೆದಿರಿಸಿಕೊಳ್ಳಿ. ರವೆಯನ್ನು ಅದೇ ಪಾನ್‍ನಲ್ಲಿ ಸ್ವಲ್ಪ ತುಪ್ಪ ಹಾಕಿ ಹುರಿದುಕೊಳ್ಳಿ. ಹುರಿದಾದ ಬಳಿಕ ಅದಕ್ಕೆ 2 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ರವೆ ಬೇಯುವ ತನಕ ಸ್ಟೌವ್‍ನ ಕಾವನ್ನು ತುಸು ಹೆಚ್ಚಿಸಿ ಬೆಂದ ಬಳಿಕ ಕಾವು ಕಡಿಮೆ ಮಾಡಿ, ರುಚಿಗೆ ತಕ್ಕ ಉಪ್ಪು ಬೆರೆಸಿ, ಕೇಸರಿ ಬಣ್ಣ ಹಾಗೂ ಬೇಕಷ್ಟು ಪ್ರಮಾಣ ದಲ್ಲಿ ಸಕ್ಕರೆ ಬೆರೆಸಿರಿ. ಅದರ ಮೇಲ್ಭಾಗಕ್ಕೆ ಸ್ವಲ್ಪ ಗೇರುಬೀಜ ಮತ್ತು ದ್ರಾಕ್ಷಿಯನ್ನು ಹರಡಿ ಕಲಸಿ, ಬಳಿಕ ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ. ಹಾಗೂ ಅದನ್ನು ಒಂದೇ ಆಕಾರಕ್ಕೆ ಒತ್ತಿರಿ ಉಳಿದಿರುವ ದ್ರಾಕ್ಷಿ ಮತ್ತು ಗೇರುಬೀಜವನ್ನು ಅದರ ಮೇಲೆ ಅಂದವಾಗಿ ಜೋಡಿಸಿ, ತಣ್ಣಗಾದ ಬಳಿಕ ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಕೊಳ್ಳಿ. ಈಗ ರುಚಿಕರವಾದ ರವೆ ಕೇಸರಿ ಸಿದ್ಧ.
?ಸಾರಾ ಮಹಮದ್, ಭಗವತಿನಗರ.