ವೀರಾಜಪೇಟೆ, ಮೇ 26: ಇಂದಿನ ಯುಗದಲ್ಲಿ ಸಂಪ್ರದಾಯ ಕ್ರೀಡೆಗಳು ಕಣ್ಮರೆಯಾಗುತ್ತಿದೆ. ಕ್ರೀಡೆಗಳಿಗೆ ಸಾಂಸ್ಕøತಿಕ ಮೆರಗು ನೀಡುವಂತೆ ಚೇತನ್ಸ್ ಯವರ್ ಗ್ರೀನ್ ಡಾನ್ಸ್ ಸಂಸ್ಥೆಯು ವಾರ್ಷಿಕ ಶಿಬಿರದಲ್ಲಿ ಮಕ್ಕಳಿಗೆ ಕ್ರೀಡೆಗಳನ್ನು ಹಮ್ಮಿಕೊಂಡು ಶಿಬಿರವನ್ನು ಮುಕ್ತಾಯಗೊಳಿಸಿದರು.
ವೀರಾಜಪೇಟೆ ಚೇತನ್ಸ್ ಯವರ್ ಗ್ರೀನ್ ಡಾನ್ಸ್ ಕಲಾ ಮಂದಿರದಲ್ಲಿ ಒಂದು ತಿಂಗಳ ಕಲಾ ವಿವಿಧ ನೃತ್ಯ ಕಲಾ ಪ್ರಕಾರಗಳ ಶಿಬಿರವನ್ನು ಆಯೋಜಿಸಿತ್ತು. ಸಂಸ್ಥೆ ಆಯೋಜಿಸಿದ್ದ ಕಲಾ ಶಿಬಿರದಲ್ಲಿ 3 ವರ್ಷದಿಂದ 25 ವರ್ಷ ಪ್ರಾಯದ ಎಲ್ಲರು ಯೋಗ ಭಾರತೀಯ ಶೈಲಿಯ ಮತ್ತು ಪಾಶ್ಚಾತ್ಯ ಸಂಸ್ಕøತಿಯ ನೃತ್ಯ ಪ್ರಕಾರಗಳು, ಯೋಗ, ಕರಾಟೆ, ಸಂಗೀತ ಮತ್ತು 13 ಬಗೆಯ ಪ್ರಕಾರಗಳನ್ನು ತರಬೇತಿ ನೀಡಲಾಯಿತು. ಶಿಬಿರದಲ್ಲಿ ವೀರಾಜ ಪೇಟೆ ನಗರ ಸೇರಿದಂತೆ ಶಿವಮೊಗ್ಗ, ಬೆಂಗಳೂರು, ಚಿಕ್ಕಮಂಗಳೂರು ಜಿಲ್ಲೆಗಳಿಂದ 40 ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಸಾಂಪ್ರದಾಯಕ ಕ್ರೀಡೆಗಳಾದ ಕಪ್ಪೆ ಆಟ, ಎತ್ತರ ಜಿಗಿತ, ಲಗೋರಿ, ಚಿನ್ನಿದಾಂಡು, ಹಗ್ಗಜಗ್ಗಾಟ, ಮರಕೋತಿ ಆಟ, ಹಾವು-ಎಣಿ ಮುಂತಾದ ಸಂಪ್ರದಾಯಕ ಕ್ರೀಡೆಗಳನ್ನು ಆಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ವ್ಯಾಯಾಮ, ಸ್ವಚ್ಛತೆಯ ಅರಿವು ಮೂಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಅಜೇಯ್ ರಾವ್ ಇಂದಿನ ಪ್ರಸ್ತುತ ದಿನಗಳಲ್ಲಿ ಇಂತಹ ದೇಶಿಯ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಶಿಬಿರದ ಮುಖ್ಯಸ್ಥ ಚೇತನ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುವ ಮೂಲಕ ತಮ್ಮ ಇಚ್ಚೆಗೆ ಅನುಗುಣವಾಗಿ ಕಲಿಕೆಯ ವಿಧಾನಗಳನ್ನು ಆರಿಸಿಕೊಂಡು ಸಾಧನೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.