ಗೋಣಿಕೊಪ್ಪ ವರದಿ, ಮೇ 26 : ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಇಲ್ಲಿನ ಅಗ್ನಿಶಾಮಕ ದಳದ 14 ಸಿಬ್ಬಂದಿಗಳನ್ನು ಸನ್ಮಾನಿಸುವ ಮೂಲಕ ಅವರ ಸೇವೆಗೆ ಪ್ರೋತ್ಸಾಹ ನೀಡಲಾಯಿತು. ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಿಬ್ಬಂದಿ ಕೆ.ಕೆ. ಕಾಳಪ್ಪ ಸೇರಿದಂತೆ 13 ಮಂದಿ ಸನ್ಮಾನ ಸ್ವೀಕರಿಸಿದರು.
ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು ಮಾತನಾಡಿ, ತುರ್ತು ಸಂದರ್ಭ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯವೈಖರಿ ಸಮಾಜಕ್ಕೆ ಹೆಚ್ಚು ಸಹಕಾರವಾಗುತ್ತಿದೆ ಈ ಸಂದರ್ಭ ಸದಸ್ಯರುಗಳಾದ ರಾಬಿನ್ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ರಘು ತಿಮ್ಮಯ್ಯ ಉಪಸ್ಥಿತರಿದ್ದರು.