ಮಡಿಕೇರಿ, ಮೇ 25: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲದ ಮುಂಜಾಗೃತಾ ಕ್ರಮಗಳ ಸಂಬಂಧ ಗ್ರಾಮಸ್ಥರೊಂದಿಗೆ ಚರ್ಚಿಸಲು ವಾರ್ಡ್‍ಸಭೆಗಳನ್ನು ಆಯೋಜಿಸಲಾಗಿದೆ. ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಗ್ರಾಮಸ್ಥರ ಕುಂದುಕೊರತೆ ಆಲಿಸುವದರೊಂದಿಗೆ ಮಾಹಿತಿ ನೀಡಲಿದ್ದಾರೆ.

ತಾ. 27 ರಂದು ಬೆಳಿಗ್ಗೆ 10.30 ಕ್ಕೆ ದೇವಸ್ತೂರು, ನಿಡುವಟ್ಟು ಗ್ರಾಮಗಳ ಸಭೆ ದೇವಸ್ತೂರು ಅಂಗನವಾಡಿ ಎದುರು ನಡೆಯಲಿದೆ. ಬಳಿಕ 12 ಗಂಟೆಗೆ ಕಾಲೂರು ಶಾಲೆಯಲ್ಲಿ ಕಾಲೂರು, ಬಾರಿಬೆಳ್ಳಚ್ಚು ವಾರ್ಡ್‍ಸಭೆ ಏರ್ಪಡಿಸಲಾಗಿದೆ. ಅಂದು ಅಪರಾಹ್ನ 2.30 ಕ್ಕೆ 2ನೇ ಮೊಣ್ಣಂಗೇರಿ ವಾರ್ಡ್‍ಸಭೆ ಅಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ನಡೆಯಲಿದೆ. ತಾ. 28 ರಂದು ವಣಚಲು ವಾರ್ಡ್‍ಸಭೆ ಬೆಳಿಗ್ಗೆ 10.30 ಕ್ಕೆ ವಣಚಲು ಸರಕಾರಿ ಶಾಲೆಯಲ್ಲಿ ಮತ್ತು 12.30 ಕ್ಕೆ ಹಮ್ಮಿಯಾಲ, ಹಚ್ಚಿನಾಡು ಸಭೆ ಹಮ್ಮಿಯಾಲ ಶಾಲೆಯಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಮುಟ್ಲು ಗ್ರಾಮದ ವಾರ್ಡ್‍ಸಭೆ ಅಲ್ಲಿನ ಅಂಗನವಾಡಿಯಲ್ಲಿ ಜರುಗಲಿದೆ.

ತಾ. 29 ರಂದು ಬೆಳಿಗ್ಗೆ 10.30ಕ್ಕೆ ಕೆ. ನಿಡುಗಣೆ ವಾರ್ಡ್‍ಸಭೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ಜರುಗಲಿದೆ.