ಸೋಮವಾರಪೇಟೆ, ಮೇ 26: ತಾಲೂಕಿನ ಕಾಜೂರು, ಶಾಂತಳ್ಳಿ, ಸೋಮವಾರಪೇಟೆ, ಗೌಡಳ್ಳಿ ಕ್ಲಸ್ಟರ್‍ನ ಸರ್ಕಾರಿ ಶಾಲೆಗಳಿಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

ತಾಲೂಕಿನ 15 ಕ್ಲಸ್ಟರ್‍ನ ಶಾಲೆಗಳಿಗೆ ಶಾಲಾ ಪ್ರಾರಂಭಕ್ಕೂ ಮೊದಲೇ ವಿತರಿಸಲಾಗುವದು. ಶೇ. 70ರಷ್ಟು ಪಠ್ಯಪುಸ್ತಕಗಳು ಈಗಾಗಲೇ ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಠ್ಯ ಪುಸ್ತಕ ವಿತರಣೆ ಸಂದರ್ಭ ಶಿಕ್ಷಣ ಸಂಯೋಜಕರಾದ ಶೇಖರ್, ಸಿ.ಆರ್.ಪಿ. ಜವರಯ್ಯ ಉಪಸ್ಥಿತರಿದ್ದರು.