ಮಡಿಕೇರಿ, ಮೇ 25: ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ 417 ಕುಟುಂಬಗಳಿಗೆ ಇದುವರೆಗೆ ಒಟ್ಟು 2,91,90,000 ಮನೆ ಬಾಡಿಗೆಯನ್ನು ಜಿಲ್ಲಾಡಳಿತ ಪಾವತಿ ಮಾಡಿದೆ.
ಪ್ರತಿ ತಿಂಗಳಿಗೆ 10 ಸಾವಿರ ರೂ.ಗಳಂತೆ ಕಳೆದ ನವೆಂಬರ್ ತಿಂಗಳಿನಿಂದ ನಿರಾಶ್ರಿತ ಕುಟುಂಬದ ಖಾತೆಗಳಿಗೆ ಬಾಡಿಗೆ ಹಣವನ್ನು ಸಂದಾಯ ಮಾಡಲಾಗುತ್ತಿದೆ. ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 67 ಕುಟುಂಬಗಳಿಗೆ, ಕೆ.ನಿಡುಗಣೆ ಗ್ರಾಮ ಪಂಚಾಯಿತಿಯ 26 ಕುಟುಂಬಗಳಿಗೆ, ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 66 ಕುಟುಂಬಗಳಿಗೆ, ಸಂಪಾಜೆ ಗ್ರಾಮ ಪಂಚಾಯಿತಿಯ 3 ಕುಟುಂಬಗಳಿಗೆ, ಮದೆ ಗ್ರಾಮ ಪಂಚಾಯಿತಿಯ 46 ಕುಟುಂಬಗಳಿಗೆ, ಬೆಟ್ಟಗೇರಿ ಗ್ರಾಮ ಪಂಚಾಯಿತಿಯ 9 ಕುಟುಂಬಗಳಿಗೆ, ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಕುಟುಂಬ, ಮಡಿಕೇರಿ ನಗರಸಭೆ ವ್ಯಾಪ್ತಿಯ 93 ಕುಟುಂಬ ಗಳಿಗೆ ಬಾಡಿಗೆ ಪಾವತಿಸಲಾಗುತ್ತಿದೆ. ಕೆದಕಲು ಗ್ರಾ.ಪಂ. ವ್ಯಾಪ್ತಿಯ 5 ಕುಟುಂಬ, ಮಾದಾಪುರ ಗ್ರಾ.ಪಂ. ವ್ಯಾಪ್ತಿಯ 44 ಕುಟುಂಬಗಳು, ಗರ್ವಾಲೆ ಗ್ರಾಮ ಪಂಚಾಯಿತಿಯ 9 ಕುಟುಂಬಗಳು, ಕಂಬಿಬಾಣೆ ಪಂಚಾಯಿತಿಯ 4 ಕುಟುಂಬಗಳು, ಕೂಡಿಗೆ ಪಂಚಾಯಿತಿಯ 3, ಕೂಡುಮಂಗಳೂರು ಪಂಚಾಯಿತಿಯ 3, ನಂಜರಾಯಪಟ್ಟಣ ಪಂಚಾಯಿತಿಯ 1, ಕಿರಗಂದೂರು ಪಂಚಾಯಿತಿಯ 5, ಬೇಲೂರು ಪಂಚಾಯಿತಿಯ 5, ಐಗೂರು ಪಂಚಾಯಿತಿಯ 1, ನೇರುಗಲಳೆ ಪಂಚಾಯಿತಿಯ 2, ಚೌಡ್ಲು ಪಂಚಾಯ್ತಿಯ 1, ಹಾನಗಲ್ಲು ಪಂಚಾಯಿತಿಯ 5, ಶಾಂತಳ್ಳಿ ಪಂಚಾಯಿತಿಯ 2, ತೋಳೂರು ಶೆಟ್ಟಳ್ಳಿ ಪಂಚಾಯಿತಿಯ 1, ಬೆಟ್ಟದಳ್ಳಿ ಪಂಚಾಯಿತಿ 1, ಕುಶಾಲನಗರ ಪಟ್ಟಣ ಪಂಚಾಯಿತಿಯ 14 ಕುಟುಂಬ ಗಳಿಗೂ ಬಾಡಿಗೆ ಪಾವತಿಯಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.