ಮಡಿಕೇರಿ, ಮೇ 25: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರು ಪಾವತಿಸುವ ಯೋಜನೆ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕ್ರೀಡಾಪಟುಗಳು 2018ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಹ ಕ್ರೀಡಾಪಟುಗಳು ಇಲಾಖಾ ಅಧಿಕೃತ ಜಾಲತಾಣ hಣಣಠಿ:seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ ಮೂಲಕ ಆನ್‍ಲೈನ್‍ನಲ್ಲಿ ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು.

ಏಕಲವ್ಯ-ಜೀವಮಾನ ಸಾಧನೆ ಪ್ರಶಸ್ತಿಗೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಯನ್ನು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅಸಾಧರಣಾ ಪ್ರತಿಭೆಯನ್ನು ತೋರಿರುವ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಏಕಲವ್ಯ ಪ್ರಶಸ್ತಿಗೆ ಇಲಾಖೆಯ ಅಧಿಕೃತ ಜಾಲತಾಣ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜಥಿಛಿ ಹಾಗೂ ಹಿರಿಯ ಕ್ರೀಡಾಪಟು, ತರಬೇತುದಾರರಾಗಿ ಸಾಧನೆ ಮಾಡಿರುವ ಹಿರಿಯ ಕ್ರೀಡಾಪಟುಗಳು ಜೀವಮಾನ ಸಾಧನೆ ಪ್ರಶಸ್ತಿಗೆ ಇಲಾಖಾ ಅಧಿಕೃತ ಜಾಲತಾಣ hಣಣಠಿ://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ ಮೂಲಕ ಆನ್‍ಲೈನ್‍ನಲ್ಲಿ ಜೂನ್ 15 ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ

ರಾಜ್ಯ ಸರ್ಕಾರದ ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6 ರಿಂದ 10ನೇ ತರಗತಿ)ಗಳಿಗೆ ವಾರ್ಷಿಕ ರೂ. 10 ಸಾವಿರದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೋಂದಾಯಿತವಾದ ಕ್ರೀಡಾ ಸಂಸ್ಥೆಗಳು 2018ರ ಜನವರಿ 1 ರ ನಂತರ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿರಬೇಕು. ಅಂದರೆ ಕ್ರೀಡಾ ಪಂದ್ಯಾವಳಿಗಳಲ್ಲಿನ 2018ರ ಜನವರಿ 1 ರಿಂದ 2018ರ ಡಿಸೆಂಬರ್ 31 ರ ಸಾಧನೆಯನ್ನು ಮಾತ್ರ ಪರಿಗಣಿಸಲಾಗುವದು.

ಆಸಕ್ತ ಕ್ರೀಡಾಪಟುಗಳು ಇಲಾಖಾ ಅಧಿಕೃತ ಜಾಲತಾಣ hಣಣಠಿ://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ ಆನ್‍ಲೈನ್ ಮೂಲಕ ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು.

ಕ್ರೀಡಾ ರತ್ನ ಪ್ರಶಸ್ತಿಗೆ

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಯೋಜನೆ ಅಡಿಯಲ್ಲಿ 2018 ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಅರ್ಹ ಕ್ರೀಡಾಪಟುಗಳಿಗೆ ‘ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ’ಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಅರ್ಹ ಕ್ರೀಡಾಪಟುಗಳು ಇಲಾಖಾ ಅಧಿಕೃತ ಜಾಲತಾಣ hಣಣಠಿ://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ ಮೂಲಕ ಜೂನ್ 15 ರೊಳಗೆ ಅರ್ಜಿ ಸಲ್ಲಿಸಬಹುದು.