*ಗೋಣಿಕೊಪ್ಪಲು, ಮೇ 25: ಕಳತ್ಮಾಡು ಗ್ರಾಮದ ಗೊಟ್ಟಡದಲ್ಲಿ ಶ್ರೀ ಕನ್ನಂಬಾಡಿ ಅಮ್ಮ, ಬಿಸಿಲ್ ಮಾರಿಯಮ್ಮ ಉತ್ಸವ ಹಾಗೂ ವೆಂಕಟರಮಣ ಸ್ವಾಮಿಯ ಹರಿಸೇವೆ ತಾ. 28 ಹಾಗೂ 29 ರಂದು ನಡೆಯಲಿದೆ. ತಾ. 28 ರಂದು ಬೆಳಿಗ್ಗೆ 8 ಗಂಟೆಯಿಂದ ಪೂಜಾ ಕಾರ್ಯಗಳು ಪ್ರಾರಂಭಗೊಳ್ಳಲಿದೆ. ಸಂಜೆ 6 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಕೋಲ ನಂತರ ದೇವರ ತೀರ್ಥ ಪ್ರಸಾದ ನಡೆಯಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಪ್ರಸಾದವನ್ನು ಏರ್ಪಡಿಸಲಾಗಿದೆ. ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ದೇವರಿಗೆ ಹರಿಕೆ ಕೊಡುವ ಕಾರ್ಯಕ್ರಮ ನಡೆಯಲಿದೆ.