ಮಡಿಕೇರಿ, ಮೇ 24: ನಗರದ ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್ಸ್ಟಿಟ್ಯುಷನ್ ವತಿಯಿಂದ ತಾ. 26 ರಂದು (ನಾಳೆ) ಜಿಲ್ಲಾಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ತರಬೇತುದಾರ ಹೆಚ್.ಎನ್. ಮಹೇಶ್ ತಿಳಿಸಿದ್ದಾರೆ.
ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಹಿಲ್ ರಸ್ತೆ ಬಳಿ ಇರುವ ಕಚೇರಿಯಲ್ಲಿ ಸ್ಪರ್ಧೆ ನಡೆಯಲಿದೆ. ಯಾವದೇ ಪ್ರವೇಶ ಶುಲ್ಕವಿರುವದಿಲ್ಲ ಮತ್ತು ವಿಜೇತರಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವದು.
ಸಬ್ ಜೂನಿಯರ್ ವಿಭಾಗದಲ್ಲಿ 4 ರಿಂದ 8 ವರ್ಷದೊಳಗಿನ ಮಕ್ಕಳಿಗೆ ಹಾಗೂ ಜೂನಿಯರ್ಸ್ ವಿಭಾಗದಲ್ಲಿ 9 ರಿಂದ 14 ವರ್ಷದೊಳಗಿನ ಮಕ್ಕಳು ಸ್ಪರ್ಧಿಸಬಹುದಾಗಿದೆ. ಎರಡೂ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಗುವದು. ವಸ್ತ್ರ ವಿನ್ಯಾಸ ಅಗತ್ಯವಾಗಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ 11 ಗಂಟೆ ಒಳಗಡೆ ನೋಂದಣಿ ಮಾಡಿಕೊಂಡು ನಂಬರ್ ಪಡೆದುಕೊಳ್ಳಬೇಕಿದೆ. ನೃತ್ಯಕ್ಕೆ ಬಳಸುವ ಹಾಡುಗಳನ್ನು ಪೆನ್ಡ್ರೆವ್ನಲ್ಲಿಯೇ ನೀಡಬೇಕಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9663326204 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.