ನವದೆಹಲಿ, ಮೇ 24: ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ನರೇಂದ್ರ ಮೋದಿ ಅವರು ಮೇ 30ರ ಗುರುವಾರದಂದು ನವದೆಹಲಿಯಲ್ಲಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.68 ವರ್ಷದ ನರೇಂದ್ರ ಮೋದಿಯವರು ಸತತ ಎರಡನೇ ಬಾರಿ ಪ್ರಧಾನಿಯಾಗಿ ಭಾರತದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. 2014ಕ್ಕಿಂತ ಈ ಬಾರಿಯ ಪದಗ್ರಹಣ ಕಾರ್ಯಕ್ರಮ ಬೃಹತ್ ಪ್ರಮಾಣದಲ್ಲಿ ನಡೆಯಲಿದೆ.ಈ ಪ್ರಮಾಣ ವಚನ ಸಮಾರಂಭಕ್ಕೆ ದೇಶದ ಗಣ್ಯರೂ ಸೇರಿದಂತೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗಿಯಾಗುವ ಸಾಧ್ಯತೆಯಿದೆ. ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಮೇ 28ರಂದು ನರೇಂದ್ರ ಮೋದಿಯವರು ತಮ್ಮನ್ನು ಗೆಲ್ಲಿಸಿದ ವಾರಣಾಸಿಗೆ ಭೇಟಿ ನೀಡಿ, ಜನರಿಗೆ ಧನ್ಯವಾದ ಅರ್ಪಿಸಲಿದ್ದಾರೆ. ನಂತರ ಮೇ 30ರಂದು ಗುಜರಾತ್‍ನ ಗಾಂಧಿನಗರಕ್ಕೆ ಕೂಡ ಭೇಟಿ ನೀಡಲಿದ್ದಾರೆ. ಹಳಬರಿಗೆ ಬಡ್ತಿ, ಹೊಸಬರಿಗೆ ಮಣೆ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಲ್ಲಿ ಗೆದ್ದು ಗೆಲುವಿನ ಸಂಭ್ರಮದಲ್ಲಿ ರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಬಾರಿ ತಮ್ಮ ಸಚಿವ ಸಂಪುಟದಲ್ಲಿ ಹಳಬರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ನಿಚ್ಚಳ ವಾಗಿದೆ. ಹಾಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕರಿಗೆ ಒಳ್ಳೆಯ ಖಾತೆ ಮತ್ತು ಬಡ್ತಿ ಸಿಗುವ ಸಾಧ್ಯತೆಗಳು ನಿಚ್ಚಳವಾಗಿದೆ.

ಆರೋಗ್ಯ ದೃಷ್ಟಿಯ ಕಾರಣ ದಿಂದ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ

(ಮೊದಲ ಪುಟದಿಂದ) ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಇನ್ನು ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿರುವ ನಟಿ ಸ್ಮೃತಿ ಇರಾನಿ ಮತ್ತು ನಿರ್ಮಲಾ ಸೀತಾರಾಮನ್ ಅವರುಗಳು ಈ ಬಾರಿ ಪ್ರಮುಖ ಖಾತೆಗಳನ್ನು ಪಡೆಯುವದರ ಜೊತೆಗೆ ತಮ್ಮ ಪ್ರಭಾವವನ್ನು ಸಂಪುಟದಲ್ಲಿ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ ಮುಕ್ತಾರ್ ಅಬ್ಬಾಸ್ ನಖ್ವಿ, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೂ ಉತ್ತಮ ಖಾತೆಗಳು ದೊರಕಲಿವೆ ಎಂಬ ಮಾತು ಕೇಳಿ ಬರುತ್ತಿವೆ.

ಕೇಂದ್ರ ಗೃಹ ಸಚಿವರಾಗಿದ್ದ ರಾಜ್‍ನಾಥ್ ಸಿಂಗ್ ಅವರಿಗೆ ಈ ಬಾರಿ ರಕ್ಷಣಾ ಖಾತೆಯ ಜವಾಬ್ದಾರಿ ಸಿಗಲಿದೆ ಎಂಬ ಮಾತು ರಾಷ್ಟ್ರ ರಾಜಧಾನಿಯಲ್ಲಿ ಗುನುಗುಡುತ್ತಿದೆ. ಅಮಿತ್ ಶಾ, ಪೀಯೂಷ್ ಗೋಯಲ್, ಪ್ರಕಾಶ್ ಜಾವ್ಡೇಕರ್ ಅವರುಗಳಿಗೂ ಸ್ಥಾನ ದೊರಕುವ ಸಾಧ್ಯತೆಯಿದೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಪರಾಭವಗೊಳಿಸಿರುವ ಜಿ.ಎಸ್. ಬಸವರಾಜ್ ಅವರಿಗೂ ಪ್ರಮುಖ ಖಾತೆ ದೊರೆಯಬಹುದು ಎಂಬ ನಿರೀಕ್ಷೆಯಿದೆ.