ಸುಂಟಿಕೊಪ್ಪ, ಮೇ 24: ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24 ನೇ ವರ್ಷದ ರಾಜ್ಯ ಮಟ್ಟದ 'ಗೋಲ್ಡ್ ಕಪ್' ಫುಟ್‍ಬಾಲ್ ಟೂರ್ನಿಯ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯಾವಳಿಯಲ್ಲಿ ಬ್ಲೂಬಾಯ್ಸ್ ಮತ್ತು ಆಮ್ಮೇಟಿ ಎಫ್.ಸಿ ಗದ್ದೆಹಳ್ಳ ತಂಡವು ಮುಂದಿನ ಸುತ್ತಿಗೆ ಪಡೆದುಕೊಂಡಿದೆ.

ಉದ್ಘಾಟನಾ ಮೊದಲ ಪಂದ್ಯಾವಳಿಯು ಆತಿಥೇಯ ಬ್ಲೂಬಾಯ್ಸ್ ಎಫ್.ಸಿ ಹಾಗೂ ಪನ್ಯ ಫುಟ್ಬಾಲ್ ತಂಡಗಳ ನಡುವೆ ಪಂದ್ಯಾವಳಿಯು ನಡೆದು ಮೋದಲಾರ್ಧದಲ್ಲಿ ಎರಡು ತಂಡಗಳಿಗೆ ಉತ್ತಮ ಅವಕಾಶಗಳು ದೊರೆತರೂ ಗೋಲುಗಳಿಸುವಲ್ಲಿ 2 ತಂಡಗಳು ವಿಫಲಗೊಂಡವು. ದ್ವಿತೀಯಾರ್ಧದಲ್ಲಿ ಬ್ಲೂಬಾಯ್ಸ್ ತಂಡದ ಆಟಗಾರರು ಬಿರುಸಿನ ಆಟಕ್ಕೆ ಇಳಿದು ಬ್ಲೂಬಾಯ್ಸ್ ತಂಡದ ಮುನ್ನಡೆ ಆಟಗಾರ ಪ್ರವೀಣ್ 12ನೇ ನಿಮಿಷದಲ್ಲಿ ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಬ್ಲೂಬಾಯ್ಸ್ ತಂಡದ ಮತ್ತೋರ್ವ ಮುನ್ನಡೆ ಆಟಗಾರ ತೌಫಿಕ್ 16ನೇ ನಿಮಿಷದಲ್ಲಿ ಮತ್ತೊಂದು ಗೋಲುಗಳಿಸುವ ಮೂಲಕ ತಂಡವನ್ನು ಗೆಲವಿನ ದಡಸೇರಿಸಿದರು. ಎದುರಾಳಿ ತಂಡಕ್ಕೆ ಹಲವಾರು ಅವಕಾಶಗಳು ದೊರೆತರೂ ಗೋಲುಗಳಿಸಲು ವಿಫಲಗೊಂಡು 2-0 ಗೋಲು ಗಳಿಂದ ಬ್ಲೂಬಾಯ್ಸ್ ತಂಡವು ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.

ದ್ವಿತೀಂiÀi ಪಂದ್ಯಾವಳಿಯನ್ನು ಸೋಮವಾರಪೇಟೆ ಡಿವೈಎಸ್‍ಪಿ ದಿನಕರಶೆಟ್ಟಿ ಉದ್ಘಾಟಿಸಿದರು ಪಂದ್ಯಾವಳಿಯು ಸ್ಕೋರ್ ಸಿಟಿ ಎಫ್.ಸಿ. ಸುಂಟಿಕೊಪ್ಪ, ಆಮ್ಮೆಟಿ ಎಫ್.ಸಿ. ಗದ್ದೆಹಳ್ಳ ತಂಡಗಳ ನಡುವೆ ನಡೆದು ಆಮ್ಮೆಟ್ಟಿ ತಂಡದ ಆಟಗಾರರು ಮೊದಲಾರ್ಧದ 10ನೇ ನಿಮಿಷದಲ್ಲಿ ರಹೆಮಾನ್ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. ಎರಡು ತಂಡಗಳಿಗೆ ಮತ್ತೆ ಹಲವು ಅವಕಾಶಗಳು ದೊರೆತರೂ ಗೋಲು ಗಳಿಸುವಲ್ಲಿ ವಿಫಲಗೊಂಡವು. ಸ್ಟೋರ್‍ಸಿಟಿ ತಂಡದ ನಾಯಕನಿಗೆ ಆಟದ ಸಂದರ್ಭ ಹಳದಿ ಬಿಲ್ಲೆ ಯನ್ನು 18ನೇ ನಿಮಿಷದಲ್ಲಿ ತೋರಿ ಸಲಾಯಿತು. ಕೊನೆಯ ನಿಮಿಷದಲ್ಲಿ ಆಮ್ಮೇಟಿ ತಂಡದ ಇರ್ಷಾದ್ ಗೋಲು ಗಳಿಸುವ ಮೂಲಕ 2-0 ಗೋಲುಗಳಿಂದ ಆಮ್ಮೆಟಿ ತಂಡವು ಜಯಗಳಿಸಿ ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.