ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದ ಹಿನ್ನೆಲೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಎಲ್ಲರಿಗೂ ಸಿಹಿ ಹಂಚಿ, ಪಟಾಕಿ ಸಿಡಿಸಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಜೈಕಾರ ಹಾಕುತ್ತಾ ಕುಣಿದರು.
ಮುಖಂಡ ಎಸ್.ಎನ್. ರಘು ಮಾತನಾಡಿ, ಬಿಜೆಪಿಯ ಐತಿಹಾಸಿಕ ಮತ್ತು ಅದ್ಭುತ ಗೆಲವನ್ನು ಕಂಡು ವಿಶ್ವವೇ ಬೆರಗಾಗಿ ಭಾರದ ದೇಶದತ್ತ ನೋಡುತ್ತಿದೆ. ಇದು ಕೇವಲ ಮೋದಿಯವರ ಗೆಲವಲ್ಲ, ಪಕ್ಷಾತೀತವಾಗಿ ಮೋದಿಯವರ ನಾಯಕತ್ವವನ್ನು ಬೆಂಬಲಿಸಿದ ಪ್ರತಿ ನಾಗರಿಕರ ಗೆಲವು ಎಂದು ಕೃತಜ್ಞತೆ ಸಲ್ಲಿಸಿದರು. ನಗರ ಬಿಜೆಪಿ ಅಧ್ಯಕ್ಷ ಯತೀಶ್, ಮುಖಂಡರಾದ ಮಹಮ್ಮದ್ ಗೌಸ್, ಭುವನೇಶ್ವರಿ, ಹರೀಶ್ ಕುಮಾರ್, ಯೋಗೇಂದ್ರ, ರಕ್ಷಿತ್, ಚಂದ್ರಶೇಖರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.