ಮಡಿಕೇರಿ, ಮೇ 23 : ಶಿಶು ಅಭಿವೃದ್ಧಿ ಯೋಜನೆಯಲ್ಲಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಒಳಪಟ್ಟಂತೆ 2019-20ನೇ ಸಾಲಿನಲ್ಲಿ 6 ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಮಾರ್ಚ್, 2 ರಂದು ಅರ್ಜಿ ಆಹ್ವಾನಿಸಲಾಗಿದ್ದು, ಶಿವರಳ್ಳಿ ಅಂಗನವಾಡಿ ಕೇಂದ್ರಕ್ಕೆ ಕೆ.ಆರ್. ಶಶಿಕಲಾ, ಆಲೂರು ಸಿದ್ದಾಪುರಕ್ಕೆ ಕೆ.ವಿ. ಮಹೇಶ್ವರಿ, ಹುದುಗೂರು ಅಂಗನವಾಡಿಗೆ ಬಿ.ಜಿ. ಜಯಮಣಿ, ಅಳಿಲುಗುಪ್ಪೆ-ಎಚ್.ಜಿ.ಅಭಿಲಾಷ್, ಕೊತ್ತನಳ್ಳಿ-ಯು.ಎಂ.ಅಶ್ವಿನಿ, ಇನಕನಹಳ್ಳಿ- ಟಿ.ಎಸ್ ನಳಿನಾಕ್ಷಿ ಈ ಅಭ್ಯರ್ಥಿಗಳನ್ನು ತಾ. 8 ರಂದು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ತಾ. 28ರೊಳಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08276-282281 ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀಶಕ್ತಿ ಭವನ ಕಟ್ಟಡ, ತಾಲೂಕು ಪಂಚಾಯತ್ ಕಚೇರಿ ಆವರಣ, ಸೋಮವಾರಪೇಟೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.