ಕೊಡ್ಲಿಪೇಟೆ : ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆಲವು ಹಾಗೂ ದೇಶದಲ್ಲಿ ಬಿಜೆಪಿಯ ಗೆಲವಿನ ಹಿನ್ನೆಲೆ ಕೊಡ್ಲಿಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕೊಡ್ಲಿಪೇಟೆಯ ಶ್ರೀ ಬಸವೇಶ್ವರ ದೇವಾಲಯ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ಪರ ಘೋಷಣೆ ಮೊಳಗಿಸಿದರಲ್ಲದೇ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯ ಕುಶಾಲಪ್ಪ, ಬಿಜೆಪಿ ಮುಖಂಡರುಗಳಾದ ಪ್ರಸಾದ್ ಪಟೇಲ್, ಬಾಬು ರಾಜೇಂದ್ರ ಪ್ರಸಾದ್, ಯೋಗೇಶ್, ಗಣೇಶ್, ಭಗವಾನ್, ಶರತ್, ನಾಗರಾಜು, ನಾಗೇಶ್, ಕ್ಯಾತೆ ಶಿವಕುಮಾರ್, ರಾಜು ಸೇರಿದಂತೆ ಇತರರು ಭಾಗವಹಿದ್ದರು.