ಮಡಿಕೇರಿ, ಮೇ 23: ಇಂದು ಬೆಳಿಗ್ಗೆ 7.42 ರ ಶುಭ ಗಳಿಗೆಯಲ್ಲಿ 7ನೇ ಹೊಸಕೋಟೆ ಯ ಶ್ರಿ ಮಹಾ ಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸವು ತಂತ್ರಿ ಗೋಪಾಲ ಕೃಷ್ಣ ಕೆದಿಲಾಯ ನೇತೃತ್ವದಲ್ಲಿ ನಡೆಯಿತು. ಈ ಪೂಜಾ ಕಾರ್ಯದಲ್ಲಿ ದೇವಸ್ಥಾನದ ಅದ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನವರು ಸೇರಿದ್ದರು. ಪೂಜಾ ಕಾರ್ಯದ ನಂತರ ಪ್ರಸಾದ ಮತ್ತು ಲಘು ಉಪಹಾರವನ್ನು ನೀಡಲಾಯಿತು.