ಗೋಣಿಕೊಪ್ಪ ವರದಿ, ಮೇ 23: ಮಲ್ಲೂರು ನಿವಾಸಿ ಕೆ.ಡಿ. ಆಶಾ (25) ಎಂಬಾಕೆ ಕಾಣೆಯಾಗಿರುವ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪತಿ ಕೆ.ಎಸ್. ದಿನೇಶ್ ಎಂಬವರ ಪತ್ನಿ ಏಪ್ರಿಲ್ 30 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಲ್ಲಿ ಸಾಲದ ಹಣ ಕಟ್ಟುತ್ತೇನೆ ಎಂದು ಕುಟ್ಟಕ್ಕೆ ತೆರಳಿದವರು ಹಿಂತಿರುಗಿ ಬಂದಿಲ್ಲ ಎಂದು ದಿನೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣ: ಕುಟ್ಟದಲ್ಲಿ ಕಾರ್ಮಿಕ ಮಹಿಳೆ ಪಣಿ ಎರವರ ಶಾಂತಿ (32) ಕಾಣೆಯಾಗಿದ್ದಾರೆ. ಎಪ್ರಿಲ್ 30 ರಂದು ಕುಟ್ಟ ಜಾತ್ರೆಗೆ ತೆರಳಿದ್ದ ಪತ್ನಿ ಹಿಂತಿರುಗಿ ಬಂದಿಲ್ಲ ಎಂದು ಪತಿ ರವಿ ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಡಿಕೇರಿ: ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಕಿರುಮಕ್ಕಿ ನಿವಾಸಿ ಶಂಕರ್ (40) ಎಂಬ ವ್ಯಕ್ತಿ ತನ್ನ ಮಗಳೊಂದಿಗೆ ಕಾಣೆಯಾಗಿದ್ದಾರೆ ಎಂದು ಆತನ ಪತ್ನಿ ಗೀತಾ ವೀರಾಜಪೇಟೆ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಮೂರು ಪ್ರತ್ಯೇಕ ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.