ವೀರಾಜಪೇಟೆ, ಮೇ 23: ಅಮ್ಮತ್ತಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಎಲ್.ಜಿ.ಭಾಸ್ಕರ್ ಅವರಿಗೆ ಬ್ಯಾಂಕ್‍ನ ಪ್ರಾದೇಶಿಕ ಮಟ್ಟದ “ಬೆಸ್ಟ್ ಎಂಪ್ಲಾಯ್” ಎಂದು ಟ್ರೋಫಿ, ಪ್ರಶಸ್ತಿ ನೀಡಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಪಿ.ಠಾಕೂರ್ ನಾಯಕ್ ಗೌರವಿಸಿದ್ದಾರೆ.

ಇತ್ತೀಚೆಗೆ ಬ್ಯಾಂಕ್‍ನ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅರುಣ್ ಹಾಗೂ ಸಿಬ್ಬಂದಿ ಹಾಜರಿದ್ದರು.