ಮಡಿಕೇರಿ, ಮೇ 23: ಸುಂಟಿಕೊಪ್ಪದ ಪ್ರಾಥಮಿಕ ಸರ್ಕಾರಿ ಶಾಲಾ ಮೈದಾನದಲ್ಲಿ ತಾ. 24 ರಿಂದ (ಇಂದಿನಿಂದ) ಜೂನ್ 2 ರವರೆಗೆ ಸುಂಟಿಕೊಪ್ಪದ ಬ್ಲೂಬಾಯ್ಸ್ ಯುವಕ ಸಂಘದ ವತಿಯಿಂದ 24 ನೇ ವರ್ಷದ ‘ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಈ ಆಕರ್ಷಕ ಹಾಗೂ ಕುತೂಹಲಕಾರಿಯಾದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಒಟ್ಟು 22 ತಂಡಗಳಿಂದ ಗೋಲ್ಡ್ ಕಪ್‍ಗಾಗಿ ಹಣಾಹಣಿ ನಡೆಯಲಿದೆ.
ಬ್ಲೂಬಾಯ್ಸ್ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಕೊಡಗಿನ ಕೊಲ್ಕೋತ್ತಾ ಎಂದೇ ಖ್ಯಾತವಾದ ಸುಂಟಿಕೊಪ್ಪದ ಫುಟ್ಬಾಲ್ ಪಂದ್ಯಾಟಕ್ಕೆ ಅದರದ್ದೇ ಆದ ಗೌರವದೊಂದಿಗೆ ಸ್ಥಾನ-ಮಾನವಿದೆ. ದೇಶ-ವಿದೇಶದೆಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕೇವಲ ಕ್ರಿಕೆಟ್ ಪಂದ್ಯಾಟವನ್ನೇ ಆಯೋಜಿಸಲಾ ಗುತ್ತದೆ ಮತ್ತು ಪುಟಾಣಿ ಮಕ್ಕಳು ಕೂಡ ಕ್ರಿಕೆಟ್ ಪಂದ್ಯಾವಳಿಯನ್ನೇ ಆಡುತ್ತಿರುವದನ್ನು ನೋಡಬಹುದು. ಆದರೆ, ಫುಟ್ಬಾಲ್ ಪಂದ್ಯಾವಳಿ ಎಲ್ಲೂ ನಡೆಯುತ್ತಿಲ್ಲ.
ಫುಟ್ಬಾಲ್ ಆಟಗಾರರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಿಂದ ಕಳೆದ 37 ವರ್ಷದ ಹಿಂದೆ ಸುಂಟಿಕೊಪ್ಪದಲ್ಲಿ ಸ್ಥಾಪನೆಯಾದ ಬ್ಲೂ ಬೂಯ್ಸ್ ಯುವಕ ಸಂಘ ಇದೀಗ ರಾಜ್ಯ ಮಟ್ಟದಲ್ಲಿ ಸಾಕಷ್ಟು ಸಾಧನೆಗಳೊಂದಿಗೆ ಮತ್ತೊಂದು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಿದೆ. ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾಟಕ್ಕೆ 64 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಕೊಡಗಿನಲ್ಲಿ ಇಷ್ಟೊಂದು ಸುದೀರ್ಘ ಇತಿಹಾಸದ ಫುಟ್ಬಾಲ್ ಪಂದ್ಯಾಟ ಬೇರೆ ಯಾವದೂ ಇಲ್ಲ ಎಂಬದೇ ಹೆಗ್ಗಳಿಕೆಯಾಗಿದೆ.
ಸುಂಟಿಕೊಪ್ಪದಲ್ಲಿ ಫುಟ್ಬಾಲ್ ಪಂದ್ಯಾಟಕ್ಕೆ ಸಮೀಪದ ಬೆಟ್ಟಗೇರಿ ಎಸ್ಟೇಟ್ ಮಾಲೀಕ ದೊಡ್ಡಮನೆ ಶಿವಪ್ಪ ಅವರು ಪೆÇ್ರೀತ್ಸಾಹ ನೀಡಿದವರಲ್ಲಿ ಪ್ರಮುಖರಾಗಿದ್ದಾರೆ. ದೊಡ್ಡಮನೆ ಶಿವಪ್ಪ ಅವರು ಕಾಲವಾದ ನಂತರ ಶಿವಪ್ಪ ಅವರ ಪುತ್ರ ವಿನೋದ್ ಶಿವಪ್ಪ ಅವರು ತನ್ನ ತಂದೆ ಡಿ.ಶಿವಪ್ಪ ಅವರ ಸ್ಮರಣಾರ್ಥ ಬ್ಲೂಬಾಯ್ಸ್ ಯುವಕ ಸಂಘಕ್ಕೆ ಪ್ರತಿ ವರ್ಷ ಟ್ರೋಫಿ, ನಗದು ಬಹುಮಾನ ನೀಡುವ ಮೂಲಕ ಫುಟ್ಬಾಲ್ ಪಂದ್ಯಾವಳಿಗೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಇದರೊಂದಿಗೆ ಸುಂಟಿಕೊಪ್ಪ ವ್ಯಾಪ್ತಿಯ ಅನೇಕ ದಾನಿಗಳು ಫುಟ್ಬಾಲ್ ಪಂದ್ಯಾಟಕ್ಕೆ ಸಹಕಾರ ಪಂದ್ಯಾವಳಿಯ ನಿರಂತರತೆಗೆ ಪೆÇ್ರೀತ್ಸಾಹ ನೀಡುತ್ತಿದ್ದಾರೆ.
1996 ರಿಂದ ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿರುವ ಬ್ಲೂ ಬಾಯ್ಸ್ ಯುವಕ ಸಂಘ, ಮಕ್ಕಳಿಂದ ಹಿರಿಯವರೆಗೂ ಈ ಪಂದ್ಯಾವಳಿ ಮೂಲಕ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಫುಟ್ಬಾಲ್ ಕ್ರೀಡೆಯತ್ತ ಆಕರ್ಷಣೆ ಮೂಡಿಸುವಲ್ಲಿ ಸಹಕಾರಿಯಾಗಿದೆ. ಪ್ರತಿ ವರ್ಷ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯನ್ನು ಸಾವಿರಾರು ಕ್ರೀಡಾಪ್ರೇಮಿಗಳು ವೀಕ್ಷಿಸುತ್ತಾ ಕ್ರೀಡಾ ಮನರಂಜನೆ ಪಡೆಯುತ್ತಿದ್ದಾರೆ. ಇಂದಿಲ್ಲಿ ವರ್ಷವೂ ಪ್ರತಿವರ್ಷದಂತೆ ನಡೆಯುತ್ತಿರುವ ರಾಜ್ಯಮಟ್ಟದ ಗೋಲ್ಡ್ ಕಪ್ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ರಾಜ್ಯವ್ಯಾಪಿಯ ಹಲವಾರು ತಂಡಗಳು ಪಾಲ್ಗೊಂಡಿವೆ. ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡಿರುವ ಅನೇಕ ಖ್ಯಾತ ಫುಟ್ಬಾಲ್ ಖ್ಯಾತನಾಮ ಆಟಗಾರರು ಭಾಗವಹಿಸಲಿದ್ದಾರೆ.
ಇಂದು ಉದ್ಘಾಟನೆ
ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯಾವಳಿಯನ್ನು ಬೆಂಗಳೂರಿನಲ್ಲಿರುವ ಕಾಫಿ ಉದ್ಯಮಿ ವಿಶಾಲ್ ಶಿವಪ್ಪ ಉದ್ಘಾಟಿಸಲಿದ್ದು, ಹಾಸನ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್‍ಕುಮಾರ್ , ಕುಶಾಲನಗರದ ಪೆÇಲೀಸ್ ಉಪಅಧೀಕ್ಷಕ ದಿನಕರ ಶೆಟ್ಟಿ, ದಾನಿಗಳಾದ ಡಿ.ವಿನೋದ್ ಶಿವಪ್ಪ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಪ್ರಥಮ ಪಂದ್ಯಾಟವು ಆತಿಥೇಯ ಬ್ಲೂಬಾಯ್ಸ್ ಯುವಕ ಸಂಘ ಮತ್ತು ಪನ್ಯ ತಂಡಗಳ ನಡುವೆ ಜರುಗಲಿದೆ. ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ಡಿ.ವಿನೋದ್ ಶಿವಪ್ಪ ಅವರು ಡಿ.ಶಿವಪ್ಪ ಸ್ಮರಣಾರ್ಥವಾಗಿ 30, 000 ರು. ನಗದು, ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ರು.20 ಸಾವಿರ ನಗದು, ಟ್ರೋಫಿ. ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಿದ್ದಾರೆ. ಈ ಬಾರಿ ಬ್ಲೂಬಾಯ್ಸ್ ಫುಟ್ಬಾಲ್ ಪಂದ್ಯಾವಳಿಯ ಪ್ರಯುಕ್ತ ಪ್ರತ್ಯೇಕ ಫೇಸ್ ಬುಕ್ ಮತ್ತು ವಾಟ್ಸಪ್ ಖಾತೆ ತೆರೆಯಲಾಗಿದೆ. ಇದರಿಂದ ಮತ್ತಷ್ಟು ಸಹಸ್ರಾರು ಕ್ರೀಡಾಭಿಮಾನಿಗಳಿಗೆ ಸುಂಟಿಕೊಪ್ಪದಲ್ಲಿ ಆಯೋಜಿತ ಪಂದ್ಯಾವಳಿಯ ಮಾಹಿತಿ ಲಭಿಸಲಿದೆ.
ಬೆಂಗಳೂರಿನ 2, ಮಂಡ್ಯದ2 , ಮೈಸೂರಿನ 4, ಕೇರಳದ ಕ್ಯಾಲಿಕಟ್ , ಕೂತುಪರಂಬ, ಕುಂಬಳ, ಉಪ್ಪಳ, ನಂಜನಗೂಡು, ಹಾಸನ, ಕೆಜಿಎಫ್ ನ ವಾರಿಯರ್ಸ್ ಫುಟ್ಬಾಲ್ ಕ್ಲಬ್, ಕೊಡಗು ಇಲವೆನ್, ಕೊಡಗರಹಳ್ಳಿಯ ನೇತಾಜಿ ಯುವಕ ಸಂಘ, ಗದ್ದೆಹಳ್ಳದ ಓಮಿಟಿ ತಂಡ ಆತಿಥೇಯ ಸುಂಟಿಕೊಪ್ಪದ ಬ್ಲೂಬಾಯ್ಸ್ ಯೂತ್ ಕ್ಲಬ್ ತಂಡವೂ ಸೇರಿದಂತೆ ಸುಮಾರು 22 ತಂಡಗಳು 24 ನೇ ವರ್ಷದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದ ಬ್ಲೂಬಾಯ್ಸ್ ಯುವಕ ಸಂಘದ ಗೌರವಾಧ್ಯಕ್ಷ ಟಿ.ವಿ. ಪ್ರಸನ್ನ, ಪ್ರತಿ ನಿತ್ಯ 2 ಪಂದ್ಯಾಟ ನಡೆಯಲಿದ್ದು ಭಾನುವಾರ 3 ಪಂದ್ಯಾಟ ಆಯೋಜಿತವಾಗಿದೆ. ಪ್ರತಿ ನಿತ್ಯ ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ನಡೆಯಲಿದ್ದು, ಜೂನ್ 1 ರಂದು ಸೆಮಿಫೈನಲ್ ಪಂದ್ಯ ಜರುಗಲಿದೆ.
ಈಗಾಗಲೇ ಬ್ಲೂ ಬಾಯ್ಸ್ ಯುವಕ ಸಂಘವು ಅನೇಕ ರೀತಿಯ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕಳೆದ ವರ್ಷ ಜಲಪ್ರಳಯದ ಸಂದರ್ಭ ಸಂತ್ರಸ್ತರಿಗೆ ನೆರವು ನೀಡಿದ ಸಂಘದ ಸದಸ್ಯರು, ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತೀ ವರ್ಷ ಒಂದಲ್ಲ ಒಂದು ರೀತಿಯ ಕ್ರೀಡಾ ಚಟುವಟಿಕೆ, ರಾಷ್ಟ್ರೀಯ ಉತ್ಸವಗಳು ಸೇರಿದಂತೆ ಇತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದು, ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ಆಟಗಾರರು ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರು ವದು ವಿಶೇಷ. ಬ್ಲೂ ಬಾಯ್ಸ್ ಯುವಕ ಸಂಘದ ಸದಸ್ಯರಲ್ಲಿಯೇ ಅನೇಕರು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿರುವದು ಕೂಡ ಗಮನಾರ್ಹ.